• Slide
    Slide
    Slide
    previous arrow
    next arrow
  • ಔಷಧ ಮಾರಾಟ ಪ್ರತಿನಿಧಿಗಳ ಶೋಷಣೆ ತಡೆಯಲು ಕ್ರಮ ಜಾರಿಗೆ ತರುವಂತೆ ಬುಪೇಂದ್ರ ಯಾದವ್‌ಗೆ ಮನವಿ

    300x250 AD

    ಶಿರಸಿ: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ವ್ಯಾಪಾರವನ್ನು ಪುನರ್ ರಚಿಸುವ ನೆಪದಲ್ಲಿ ಔಷಧ ಮಾರಾಟ ಪ್ರತಿನಿಧಿಗಳನ್ನು ಕೆಲಸದಿಂದ ತೆಗದು ಹಾಕುತ್ತಿದ್ದಾರೆ.Bayer, MSD, Glaxo, Novartis, Sanofi ಮತ್ತು ಇತ್ತೀಚೀಗಷ್ಟೇ Pfizer ನಿಂದ ಪ್ರಾರಂಭಿಸಿ ದೇಶಾದ್ಯಂತ ಕೆಲಸ ಮಾಡುತ್ತಿರುವ ಹಲವಾರು ಔಷಧ ಮಾರಾಟ ಪ್ರತಿನಿಧಿಗಳ ಕೆಲಸಗಳನ್ನು ಕೊನೆಗೊಳಿಸಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾದ ಈ ಕಂಪನಿಗಳ ಹೇಳಿಕೆಗಳಿಂದ ಘೋಷಿಸಲ್ಪಟ್ಟಂತೆ, ಜಾಗತಿಕ ನೀತಿಗೆ ಅನುಗುಣವಾಗಿ ಈ ಕಾರ್ಯತಂತ್ರದ ನಿರ್ಧಾರಗಳಾಗಿದೆ ಮತ್ತು ಭಾರತದಲ್ಲಿ ಮಾರಾಟ ಪ್ರಚಾರದ ಉದ್ಯೋಗಿಗಳ ಕೆಲಸ “ಅವಶ್ಯಕತೆಗಿಂತಲೂ ಹೆಚ್ಚಾಗಿರುವಿಕೆ” ಎಂದು ಈ ಕಂಪನಿಗಳು ಉಲ್ಲೇಖಿಸುತ್ತವೆ.

    ಪ್ರೋಟೀನ್ ಪೌಡರ್‌ಗೆ ಪ್ರಸಿದ್ದಿಯಾಗಿರುವ ಬೆಂಗಳೂರಿನ ಬ್ರಿಟಿಷ ಬಯಲಾಜಿಕಲ್ಸ್ ಕಂಪನಿಯು ವಿಶ್ವದಾದ್ಯಂತ ವ್ಯಾಪಾರ ವಹಿವಾಟನ್ನು ವಿಸ್ತರಿಸಿಕೊಂಡು ಸಾವಿರಾರು ಕೋಟಿ ರೂಪಾಯಿಗಳ ಲಾಭ ಮಾಡುತ್ತಿದ್ದರೂ ಔಷಧ ಮಾರಾಟ ಪ್ರತಿನಿಧಿಗಳ ಭವಿಷ್ಯ ನಿಧಿಯ ವಂತಿಕೆಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದೇ ನೌಕರರಿಗೆ ವಂಚನೆ ಮಾಡಿದೆ ಹಾಗೂ ನ್ಯಾಯ ಕೇಳಿದ ಮಾರಾಟ ಪ್ರತಿನಿಧಿಗಳನ್ನು ದುರುದ್ದೇಶದಿಂದ ದೂರದ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ ಹಾಗೂ ಕೆಲಸದಿಂದ ತೆಗೆದು ಹಾಕಿದೆ.
    ಬೆಂಗಳೂರಿನಿಂದ ವಿಶ್ವದಾದ್ಯಂತ ತನ್ನ ವ್ಯಾಪಾರ ವಹಿವಾಟುನ್ನು ವಿಸ್ತರಿಸಿರುವ ಹಿಮಾಲಯ ವೆಲ್ನಸ್ ಔಷಧ ಕಂಪನಿಯು ಹಲವಾರು ಫ್ರ್ಯಾಂಚೈಸ್ ಔಷಧ ಮಾರಾಟ ಪ್ರತಿನಿಧಿಗಳನ್ನು ವಜಾಗೊಳಿಸಿತು ಮತ್ತು ದ್ವಿಪಕ್ಷೀಯ ಚರ್ಚೆಯನ್ನು ಬೈಪಾಸ್ ಮಾಡುವ ಮೂಲಕ ಜೀಯಸ್ ಡಿವಿಜನ್ ನ ಕಾರ್ಯಾಚರಣೆಯನ್ನು ಮುಚ್ಚಿತು ಮತ್ತು ಈಗ ಎಲ್ಲಾ ಕಾರ್ಮಿಕ ವಿರೋಧಿ ಕೆಟ್ಟ ತಂತ್ರಗಳನ್ನು ಅಳವಡಿಸಿಕೊಂಡು ಔಷಧ ಮಾರಾಟ ಪ್ರತಿನಿಧಿಗಳನ್ನು ಭಯಭೀತಿಗೊಳಿಸುವ ಮೂಲಕ ಅವರ ಕೆಲಸದ ವಾತಾವರಣದಲ್ಲಿ ನರಕವನ್ನೇ ಸೃಷ್ಟಿಸಿದೆ. ಪ್ರತಿಭಟನೆ ನಡೆಸುತ್ತಿರುವ ಮಾರಾಟ ಪ್ರತಿನಿಧಿಗಳಿಗೆ ಬೆದರಿಕೆ, ಕಿರುಕುಳಗಳ, ವರ್ಗಾವಣೆ, ವಜಾಗೊಳಿಸುವಿಕೆ, ವೇತನ ಮತ್ತು ಸಾರಿಗೆ ಹಾಗೂ ಇತರ ವೆಚ್ಚಗಳ ನಿಲುಗಡೆ ಮಾಡುವ ಮೂಲಕ ದೇಶದ ಕಾನೂನುಗಳ ಉಲ್ಲಂಘನೆಯನ್ನು ಈ ಹಿಮಾಲಯ ವೆಲ್ನೆಸ್ ಕಂಪನಿ ಮಾಡಿದೆ.
    ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿರುವ ಆಂಗ್ಲೋ ಫ್ರೆಂಚ್ ಡ್ರಗ್ಸ ಕಂಪನಿಯ ಆಡಳಿತ ಮಂಡಳಿಯು ಕಾರ್ಮಿಕ ಸಂಘಟನೆಯ ನಾಯಕತ್ವ ವಹಿಸಿರುವ ಮಾರಾಟ ಪ್ರತಿನಿಧಿಗಳನ್ನು ಬಲಿಪಶು ಮಾಡಲು ಎಲ್ಲಾ ಕಾರ್ಯವಿಧಾನಗಳನ್ನು ಆಶ್ರಯಿಸುತ್ತಿದೆ. ಈ ಆಡಳಿತ ಮಂಡಳಿಯು ಔಷಧ ಮಾರಾಟ ಪ್ರತಿನಿಧಿಗಳನ್ನು ಹೊರ ರಾಜ್ಯಗಳಿಗೆ ವರ್ಗಾಯಿಸಿತು. ಏಕಪಕ್ಷೀಯ ಕೆಲಸದ ಹೊರೆಗಳನ್ನು ವಿಧಿಸಿತು ಮತ್ತು ನ್ಯಾಯ ಮಂಡಳಿಗಳಲ್ಲಿ ಕಾರ್ಮಿಕ ವಿವಾದಗಳು ಬಾಕಿಯಿರುವಾಗ ತಮ್ಮ ಉತ್ಪನ್ನಗಳನ್ನು ಮತ್ತೊಂದು ಕಂಪನಿಗೆ ಮಾರಾಟ ಮಾಡಿತು. ಆಡಳಿತ ಮಂಡಳಿಯು ಸಹಿ ಮಾಡಿದ ವೇತನ ಒಪ್ಪಂದದ ಪ್ರಕಾರ ಮಾರಾಟ ಪ್ರತಿನಿಧಿಗಳಿಗೆ ವೇತನವನ್ನು ನಿರಾಕರಿಸಿದೆ.

    300x250 AD

    ಈ ಬಹುರಾಷ್ಟ್ರೀಯ ಕಂಪನಿಗಳು ಫ್ರಾಂಚೈಸ್ ಮಾರ್ಕೆಟಿಂಗ್ ಮೂಲಕ ಮಾರಾಟ ಪ್ರಚಾರ ಕಾರ್ಯದ ದೀರ್ಘಕಾಲಿಕ ಸ್ವರೂಪವನ್ನು ಬದಲಿಸುವ ಗುರಿಯನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ಸೇವಾ ಷರತ್ತುಗಳನ್ನು ಅತಿರೇಕವಾಗಿ ಉಲ್ಲಂಘಿಸುತ್ತಿರುವ ಔಷಧ ಉದ್ಯಮದಲ್ಲಿ ಕಂಪನಿಗಳ ವಿಲೀನದ ಅನೇಕ ಘಟನೆಗಳು ಸಂಭವಿಸುತ್ತಿವೆ. ಇತ್ತೀಚೀನ ದಿನಗಳಲ್ಲಿ ಕೆಲವು ಹಣಕಾಸು ಸಂಸ್ಥೆಗಳು ಖರೀದಿ ಭರಾಟೆಯಲ್ಲಿವೆ ಮತ್ತು ಹಲವಾರು ಔಷಧ ಕಂಪನಿಗಳ ಸ್ವಾಧೀನ ಪ್ರಕ್ರಿಯೆಗಳು ದಟ್ಟವಾಗಿ ಮತ್ತು ವೇಗವಾಗಿ ನಡೆಯುತ್ತಿದೆ ಎಂದು ಗಮನಿಸಲಾಗಿದೆ. ಇದರಿಂದ ದೇಶದ ಜನಕ್ಕೆ ಅಪಾಯವಿದೆ ಎನ್ನುವ ತಿಳುವಳಿಕೆ ಕೇಂದ್ರ ಸರ್ಕಾರಕ್ಕೆ ಇದ್ದರೂ ಮೂಕ ಪ್ರೇಕ್ಷಕನಾಗಿದೆ. ಇದಕ್ಕೆ ಪೂರಕವೆಂಬಂತೆ ಭಾರತ್ ಸೀರಮ್ ಮತ್ತು ಟಿ.ಟಿ.ಕೆ. ಕಂಪನಿಗಳ ವಿಲೀನ ಇತ್ತೀಚಿನ ಉದಾಹರಣೆಗಳಾಗಿವೆ. ಭಾರತ್ ಸೀರಮ್ ನಿಂದ ಟಿ.ಟಿ.ಕೆ. ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಂಡ ನಂತರ ಹೊಸ ಕಂಪನಿಯಲ್ಲಿ ಉದ್ಯೋಗ ಪಡೆದ ಔಷಧ ಮಾರಾಟ ಪ್ರತಿನಿಧಿಗಳಿಗೆ ಕಾರ್ಮಿಕ ವಿರೋಧಿ ಸೇವಾ ಷರತ್ತುಗಳನ್ನು ಸ್ವೀಕರಿಸಲು ಒತ್ತಾಯಿಸಲಾಯಿತು ಮತ್ತು ಹೆಚ್ಚಿನ ಸಂಖ್ಯೆಯ ಮಾರಾಟ ಪ್ರತಿನಿಧಿಗಳನ್ನು ಸಾಮಾನ್ಯ ನೈಸರ್ಗಿಕ ನ್ಯಾಯವನ್ನು ಕೊಡದೇ ದೇಶದ ಕಾನೂನುಗಳನ್ನು ಉಲ್ಲಂಘಿಸಿ ನೂರಾರು ಜನರನ್ನು ಕೆಲಸದಿಂದ ವಜಾಗೊಳಿಸಲಾಯಿತು.
    Pfizer ಮತ್ತುTTK ಕಂಪನಿಗಳಲ್ಲಿಯೇ ಸುಮಾರು 200ಕ್ಕೂ ಹೆಚ್ಚಿನ ಮಾರಾಟ ಪ್ರತಿನಿಧಿಗಳನ್ನು ಸರ್ಕಾರಕ್ಕೆ ತಿಳಿಸದೆ ಹಾಗೂ ದೇಶದ ಕಾನೂನನ್ನು ಸಂಪೂರ್ಣ ಉಲ್ಲಂಘಿಸಿ ಕುಂದುಕೊರತೆ ಸಮಿತಿಯನ್ನು ಕತ್ತಲೆಯಲ್ಲಿಟ್ಟು ಔಷಧ ಮಾರಾಟ ಪ್ರತಿನಿಧಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
    ಅದೇ ರೀತಿ ಮೂರು ದಶಕಗಳಿಗೂ ಹೆಚ್ಚು ಕಾಲ ಮಾರಾಟ ಪ್ರತಿನಿಧಿಗಳ ದ್ವಿಪಕ್ಷೀಯತೆಯ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಂಡು ನೂರಾರು ಕೋಟಿ ಸಂಪತ್ತನ್ನು ಗಳಿಸಿದ ಅಲ್ಬರ್ಟ್ ಡೇವಿಡ್ ಆಡಳಿತ ಮಂಡಳಿಯು ಈಗ ಮಾರಾಟ ಪ್ರತಿನಿಧಿಗಳ ಮೇಲೆ ಅನಾಗರಿಕ ರೀತಿಯ ಕೆಲಸಗಳನ್ನು ಹೇರಿದೆ ಹಾಗೂ ದೀರ್ಘಕಾಲದ ದ್ವಿಪಕ್ಷೀಯ ಸಂಬಂಧವನ್ನು ನಿರ್ಲಕ್ಷಿಸಿ ಎಲ್ಲಾ ರೀತಿಯ ಅನ್ಯಾಯಗಳನ್ನು ಮಾರಾಟ ಪ್ರತಿನಿಧಿಗಳಿಗೆ ಮಾಡುತ್ತಿದ್ದು, ಕೋವಿಡ್ ಸಮಯದಲ್ಲಿ ಕೆಲಸದ ದಿನಗಳ ಕಡಿತ ಮಾಡಿ, ವೇತನವಿಲ್ಲದ ರಜೆ ಎಂದು ಗುರುತಿಸಿ ನೌಕರರನ್ನು ವಜಾಗೊಳಿಸಿದೆ ಹಾಗೂ ಕೆಲವರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ, ವೇತನ ಕಡಿತ ಮಾಡುವ ಮೂಲಕ ಮಾರಾಟ ಪ್ರತಿನಿಧಿಗಳನ್ನು ಆರ್ಥಿಕವಾಗಿ ಕತ್ತುಹಿಸುಕುವ ಕೆಲಸ ಮಾಡಿದೆ.
    ಹಿಮಾಲಯ ಮತ್ತು ಅಲ್ಬರ್ಟ್ ಡೇವಿಡ್ ಕಂಪನಿಯ ಎರಡೂ ಆಡಳಿತ ಮಂಡಳಿಗಳು ಸಂಘಟನೆಯ ನಾಯಕತ್ವ ವಹಿಸಿರುವವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಶೋಕಾಸ್ ಮತ್ತು ಚಾರ್ಜ ಶೀಟ್‌ಗಳನ್ನು ಹಾಕಿ, ದುರುದ್ದೇಶದಿಂದ ವಿಚಾರಣೆಗಳನ್ನು ನಡೆಸುತ್ತಿದ್ದಾರೆ. ಆದರೆ ಆಶ್ಚರ್ಯಕರ ಸಂಗತಿಯೆನೆಂದರೆ, ಈ ದುರುದ್ದೇಶ ಪೂರಕ ವರ್ಗಾವಣೆ ಆದೇಶವನ್ನು ಮಾರಾಟ ಪ್ರತಿನಿಧಿಗಳು ಪಾಲಿಸದಿರುವುದು ಕಾರಣ ಎಂದು ಕಾರ್ಮಿಕ ಇಲಾಖೆಗೆ ಈ ಎರಡೂ ಕಂಪನಿಗಳ ಆಡಳಿತ ಮಂಡಳಿಯವರು ಸಲ್ಲಿಸಿದ್ದಾರೆ.
    ಈ ಔಷಧ ತಯಾರಕ ಕಂಪನಿಗಳು ದೇಶದ ಸಂವಿಧಾನದ ಆಶಯಗಳನ್ನು ಧಿಕ್ಕರಿಸಿದೆಯಲ್ಲದೇ ಮಾರಾಟ ಪತ್ರಿನಿಧಿಗಳ ರಕ್ಷಣೆಗೆ ಇರುವ ಎಸ್.ಪಿ.ಇ. ಕಾಯಿದೆಯನ್ನು ಜಾರಿಗೊಳಿಸದೇ ಔಷಧ ಮಾರಾಟ ಪ್ರತಿನಿಧಿಗಳನ್ನು ಶೋಷಣೆ ಮಾಡುತ್ತಿವೆ. ಈ ಬಗ್ಗೆ ಹಲವಾರು ಬಾರಿ ಸರ್ಕಾರಗಳ ಗಮನಕ್ಕೆ ತಂದರೂ ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ಆದ್ದರಿಂದ ದೇಶಾದ್ಯಂತ ಜು.19 ರಂದು “ವಂಚನೆ ವಿರೋಧ ದಿನ” ವನ್ನಾಗಿ ಆಚರಿಸುತ್ತಿದ್ದು ಶಿರಸಿಯಲ್ಲಿರುವ ಎಲ್ಲಾ ಔಷಧ ಮಾರಾಟ ಪ್ರತಿನಿಧಿಗಳು, ಸಹಾಯಕ ಕಮೀಶನರ್, ಶಿರಸಿ ರವರ ಮೂಲಕ ಕೇಂದ್ರ ಕಾರ್ಮಿಕ ಸಚಿವರಾದ ಬುಪೇಂದ್ರ ಯಾದವ್‌ರವರಿಗೆ ಮನವಿ ಸಲ್ಲಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top