Slide
Slide
Slide
previous arrow
next arrow

ಪ್ರವಾಹಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

300x250 AD

ಹೊನ್ನಾವರ: ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಅಧಿಕಾರಿಗಳು ಹಾಗೂ ಸ್ಥಳಿಯ ನಿವಾಸಿಗಳಿಂದ ಮಾಹಿತಿ ಪಡೆದರು. ತಾಲೂಕಿನ ಹಳದಿಪುರ ಗ್ರಾಮದ ಬಡಗಣಿ ನದಿಯಿಂದ ಪ್ರವಾಹಕ್ಕೆ ಒಳಪಟ್ಟ ಹಳದೀಪುರ ಗ್ರಾಮ, ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯ ನೇರಪ್ರದೇಶ ಹಾಗು ಕಾಳಜಿ ಕೇಂದ್ರ ಹಾಗೂ ಕಡತೋಕಾ, ಕೆಕ್ಕಾರ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹೂಜುಮುರಿ ಸುತ್ತಮುತ್ತ ಪ್ರದೇಶಗಳಲ್ಲಿ ವಾಸಿಸುವ ಜನರ ಬದುಕಿನ ಬಗ್ಗೆ ಪರಿಶೀಲಿಸಿದರು. ಕೆಕ್ಕಾರ್ ಕಾಳಜಿ ಕೇಂದ್ರದಲ್ಲಿ ಊಟ ಸೇವನೆಯ ಮೂಲಕ ಕೆಲ ಸಮಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ತದನಂತರ ಗುಂಡಬಾಳ ನದಿಯ ನೆರೆಪೀಡಿತ ಪ್ರದೇಶದ ಚಿಕ್ಕನಕೊಡ್ ಹಾಗೂ ಗುಂಡಿಬೈಲ್ ಎಚ್ ಪಿ ಎಸ್ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಂಡಬಾಳ ನಡಿಯಂಚಿನಲ್ಲಿ ಅಳವಡಿಸಿರುವ ರೌಲಿಂಗ್ ನ್ನು ಪರಿಶೀಲಿಸಿದರು. ಅಲ್ಲಿಂದ ಭಾಸ್ಕರಿ ಕಾಳಜಿ ಕೇಂದ್ರಕ್ಕೆ ತೆರಳಿ ನೆರೆ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ನೆರೆ ಪೀಡಿತ ಪ್ರದೇಶದವರು ಕೆಲವರು ಶಾಶ್ವತ ಪರಿಹಾರ ಕೇಳುತ್ತಿದ್ದಾರೆ. ಇನ್ನೂ ಕೆಲವರು ನದಿ ತೀರದ ಮನೆ ಬಿಟ್ಟು ಬರಲು ತಯಾರಿ ಇಲ್ಲ. ಗ್ರಾ. ಪಂ ದವರು ನಿರ್ದಿಷ್ಟ ಸ್ಥಳವನ್ನು ನೋಡಿ ಪ್ರಸ್ತಾವನೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳತ್ತೇವೆ. ನೆರೆ ಸಿದ್ಧತೆಯನ್ನು ಮುಂಚಿತವಾಗಿ ಮಾಡಿಕೊಂಡಿದ್ದೆವು. ಆ ಕಾರಣದಿಂದ ಜನರಿಗೆ ಯಾವ ತೊಂದರೆಯು ಆಗದಂತೆ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂದು ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಭಟ್ಕಳ ಸಹಾಯಕ ಆಯುಕ್ತ ಮಮತಾದೇವಿ ಜಿ.ಎಸ್, ತಹಶೀಲ್ದಾರ್ ನಾಗರಾಜ ನಾಯ್ಕಡ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ನಾಯ್ಕ, ಸಿಪಿಐ ಶ್ರೀಧರ್ ಎಸ್. ಆರ್, ಉಪತಹಶೀಲ್ದಾರರು, ನೋಡಲ್ ಅಧಿಕಾರಿಗಳು, ಪಿಡಿಒಗಳು, ಗ್ರಾಮಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಮಾಹಿತಿ ನೀಡಿದರು.

300x250 AD
Share This
300x250 AD
300x250 AD
300x250 AD
Back to top