• Slide
  Slide
  Slide
  previous arrow
  next arrow
 • ‘ಆಜಾದಿ ಕಿ ಅಮೃತ್‌ ಮಹೋತ್ಸವ್’:‌ ತ್ರಿವರ್ಣಗಳಿಂದ ಬೆಳಗಿದ ರೈಲು ನಿಲ್ದಾಣ

  300x250 AD

  ನವದೆಹಲಿ: ಭಾರತವು ತನ್ನ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಆಜಾದಿ ಕಾ ಅಮೃತ್ ಮಹೋತ್ಸವ’ ಥೀಮ್ ಅಡಿಯಲ್ಲಿ ದೇಶಾದ್ಯಂತ ವಿವಿಧ ರೀತಿಯ ಆಚರಣೆಗಳಿಗೆ ಕರೆ ನೀಡಿದೆ.

  ಇದಕ್ಕೆ ಅನುಸಾರವಾಗಿ ಭಾರತೀಯ ರೈಲ್ವೇಯು ವಿವಿಧ ಚಟುವಟಿಕೆಗಳೊಂದಿಗೆ “ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಷನ್ಸ್” ಕಾರ್ಯಕ್ರಮದ ಸಾಂಪ್ರದಾಯಿಕ ಸಾಪ್ತಾಹಿಕವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

  ರೈಲ್ವೆ  ಸೋಮವಾರ  ಮುಂಬೈನ ಐಕಾನಿಕ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಅನ್ನು ತ್ರಿವರ್ಣ ದೀಪಗಳಿಂದ ಬೆಳಗಿಸಿದೆ. ಇದರ ಚಿತ್ರಗಳನ್ನು ಸೆಂಟ್ರಲ್ ರೈಲ್ವೆ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

  ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ ಇತಿಹಾಸದ ಪ್ರಮುಖ ಭಾಗವಾಗಿದೆ. ಭಾರತೀಯ ಉಪಖಂಡದ ಮೊದಲ ರೈಲು ಇಲ್ಲಿಂದ ಓಡಿತು ಮತ್ತು ಮುಂಬೈ ಸ್ವಾತಂತ್ರ್ಯ ಹೋರಾಟದ ಚಳುವಳಿಯ ಕೇಂದ್ರಗಳಲ್ಲಿ ಇದು ಒಂದಾಗಿದೆ.

  300x250 AD

  https://twitter.com/hashtag/Iconic?ref_src=twsrc%5Etfw%7Ctwcamp%5Etweetembed%7Ctwterm%5E1549054681091297280%7Ctwgr%5E%7Ctwcon%5Es1_&ref_url=https%3A%2F%2Fnews13.in%2Farchives%2F214080&src=hashtag_click

  ಕೃಪೆ-https://news13.in/

  Share This
  300x250 AD
  300x250 AD
  300x250 AD
  Leaderboard Ad
  Back to top