• Slide
    Slide
    Slide
    previous arrow
    next arrow
  • ಗಡಿ ಚೆಕ್‌ಪೋಸ್ಟ’ಗಳಲ್ಲಿ ಭದ್ರತೆ ಹೆಚ್ಚಿಸಲು ಆಗ್ರಹ

    300x250 AD

    ಕಾರವಾರ: ಗಡಿ ಚೆಕ್‌ಪೋಸ್ಟ ಗಳಲ್ಲಿ ಭದ್ರತೆ ಹೆಚ್ಚಿಸಲು ಆಗ್ರಹಿಸಿ ಜನಶಕ್ತಿ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ರವಾನಿಸಲಾಯಿತು.

    ಸೋಮವಾರ ಕಂಟೇನರ್ ಲಾರಿಯ ಮೂಲಕ ಸುಮಾರು 26 ಲಕ್ಷ ರೂ, ಮೌಲ್ಯದ ಗೋವಾ ಮದ್ಯವನ್ನ ಸಾಗಿಸುತ್ತಿದ್ದ ವೇಳೆ ಕಾರವಾರ ನಗರದ ಬಿಣಗಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ದಾಳಿ ನಡೆಸಿ, ಆರೋಪಿಯೋರ್ವನನ್ನು ಮದ್ಯದ ಮಾಲು ಹಾಗೂ ಕಂಟೇನರ್ ಲಾರಿ ಸಮೇತ ವಶಕ್ಕೆ ಪಡೆದಿದೆ. ಗೋವಾ- ಕರ್ನಾಟಕ ಗಡಿ ಭಾಗದ ಮಾಜಾಳಿಯಲ್ಲಿ ಅಬಕಾರಿ ಚೆಕ್‌ಪೋಸ್ಟ್ ಇದ್ದು, ತದನಂತರ ಕಾರವಾರ ನಗರಕ್ಕೆ ಪ್ರವೇಶಿಸುವ ಪೂರ್ವ ಸದಾಶಿವಗಡ ನಾಕಿಯ ಬಳಿ ಪೊಲೀಸ್ ಔಟ್‌ಪೋಸ್ಟ್ ನಿರ್ಮಿಸಲಾಗಿದೆ. ಕಾರವಾರ ನಗರದಿಂದ ಹೊರಬೀಳುವ ಲಂಡನ್ ಬ್ರಿಡ್ಜ್ ಬಳಿಯೂ ಪೊಲೀಸ್ ಔಟ್‌ಪೋಸ್ಟ್ ಇದೆ, ಆದರೆ, ಆರೋಪಿತ ಈ ಎಲ್ಲಾ ಚೆಕ್‌ಪೋಸ್ಟನ್ನೂ ದಾಟಿ ಕಾರವಾರ ನಗರದ ಹೊರಭಾಗವಾದ ಬಿಣಗಾದಲ್ಲಿ ಮದ್ಯ ಸಾಗಿಸುವ ವೇಳೆ ಪೊಲೀಸರಿಗೆ ಸೆರೆ ಸಿಕ್ಕಿಬಿದ್ದಿದ್ದಾನೆ. ಇದರಿಂದಾಗಿ ಈ ಪ್ರಕರಣದಲ್ಲಿ ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳ, ಚೆಕ್‌ಪೋಸ್ಟ್ ತಂಡದ ವೈಫಲ್ಯ ಎದ್ದು ತೋರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

    ಔಷಧಿ ಎಂಬ ಕಾರಣಕ್ಕೆ ಮಾಜಾಳಿ ಗಡಿ ಚೆಕ್‌ಪೋಸ್ಟಲ್ಲಿ ಪರಿಶೀಲಿಸದೆ ಕಂಟೇನರ್ ಲಾರಿಯನ್ನು ಮುಂದಕ್ಕೆ ಬಿಟ್ಟಿದ್ದಾರೆನ್ನಲಾಗಿದೆ. ಔಷಧಿಯ ನೆಪದಲ್ಲಿ ಮುಂದೊಂದು ದಿನ ಕಾರವಾರ ನಗರಕ್ಕೆ ಶಸ್ತ್ರಾಸ್ತ್ರ, ಆರ್‌ಡಿಎಕ್ಸಂಥ ಸ್ಫೋಟಕಗಳನ್ನು ಕೂಡ ಬಹಳ ಸುಲಭವಾಗಿ ದುಷ್ಕರ್ಮಿಗಳು ತರಬಹುದು ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಹೀಗಾಗಿ ಕಾರವಾರ ಸೇರಿದಂತೆ ರಾಜ್ಯದ ಗಡಿಗಳಲ್ಲಿ ಭದ್ರತೆಯನ್ನ ಹೆಚ್ಚಿಸಬೇಕು. ಗಡಿಗಳಲ್ಲಿ ಪೊಲೀಸ್ ಅಬಕಾರಿ ಅಧಿಕಾರಿಗಳ ಜೊತೆಗೆ ಸಿಐಎಸ್ಎಫ್ ಅಥವಾ ಇನ್ಯಾವುದೇ ಚರತಾ ಪಡೆಗಳ ಬಂದಿಯವ ಯೋಚಿಸಬೇಕಿದೆ ಈಗಿರುವ

    300x250 AD

    ಚೆಕ್‌ಪೋಸ್ಟ್ ತಂಡಗಳಿಗೆ ವಾಹನಗಳ ಪರಿಶೀಲನೆಗೆ ಅತ್ಯಾಧುನಿಕ ಪರಿಶೀಲನಾ ಸಾಧನಗಳನ್ನ ಒದಗಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದು, ಮದ್ಯ ಸಾಗಾಟಕ್ಕೆ ಅನುವು ಮಾಡಿಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

    ಜಿಲ್ಲಾಧಿಕಾರಿ ಮುಲ್ಕಿ ಮುಗಿಲನ್ ಮನವಿ ಸ್ವೀಕರಿಸಿದರು.ಮನವಿ ಸಲ್ಲಿಸುವ ವೇಳೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಪ್ರಮುಖರಾದ ರಾಮ ನಾಯ್ಕ, ಬಾಬು ಶೇಖ್, ಸುರೇಶ್ ನಾಯ್ಕ, ಕಾಶೀನಾಥ ನಾಯ್ಕ, ಸಂದೇಶ್ ನಾಯ್ಕ, ಸಿ.ಎನ್. ನಾಯ್ಕ, ಸೂರಜ್ ಕುರುಮಕರ್, ರೋಹಿದಾಸ್ ಬಾನಾವಳಿ ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top