ಕಾರವಾರ: ತಾಲೂಕಿನ ಶೇಜವಾಡ 110 ಕೆವಿ ಉಪಕೇಂದ್ರದಲ್ಲಿ 10ಎಮ್ವಿಎ ಶಕ್ತಿ ಪರಿವರ್ತಕದ ತುರ್ತು ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಜು.20ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕೆಹೆಚ್ಬಿ, ನಂದನಗದ್ದಾ, ತೇಲಂಗ್ರೋಡ್, ಸುಂಕೇರಿ, ಶಿರವಾಡ ಮತ್ತು ಇಂಡಸ್ಟ್ರಿಯಲ್ ಫೀಡರ್ಗಳ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕೆಲಸ ಕೈಗೊಂಡಿರುವುದರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.