Slide
Slide
Slide
previous arrow
next arrow

ತಾಲೂಕಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಪದಾಧಿಕಾರಿಗಳ ಆಯ್ಕೆ

300x250 AD

ಸಿದ್ದಾಪುರ: ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ನಾಗರಾಜ ನಾರ್ವೇಕರವರ ಆದೇಶದ ಮೇರೆಗೆ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹಾಗೂ ಕಾಂಗ್ರೆಸ್ ಮುಖಂಡರುಗಳ ನೇತೃತ್ವದಲ್ಲಿ ತಾಲೂಕು ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಗಂಗಾಧರ ಜಿ.ಮಡಿವಾಳ ಇವರು ತಾಲೂಕಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ.

ಹಲಗೇರಿ ಜಿ.ಪಂ. ಕ್ಷೇತ್ರದ ಉಪಾಧ್ಯಕ್ಷರಾಗಿ ಅಣ್ಣಪ್ಪ ಕೆ.ನಾಯ್ಕ ಸುಂಕತ್ತಿ, ಕಾರ್ಯದರ್ಶಿಯಾಗಿ ಉಮೇಶ ಎಂ.ನಾಯ್ಕ ಗೋಳಗೋಡ ಆಯ್ಕೆಯಾಗಿರುತ್ತಾರೆ. ದೊಡ್ಮನೆ ಜಿ.ಪಂ. ಕ್ಷೇತ್ರದ ಉಪಾಧ್ಯಕ್ಷರಾಗಿ ರಮೇಶ ಗೌಡ ಬಳೂರು, ಕಾರ್ಯದರ್ಶಿಯಾಗಿ ಕೆ.ಟಿ.ನಾಯ್ಕ, ಕ್ಯಾದಗಿ ಆಯ್ಕೆಯಾಗಿರುತ್ತಾರೆ.ಅಣಲೇಬೈಲ್ ಜಿ.ಪಂ. ಕ್ಷೇತ್ರದ ಉಪಾಧ್ಯಕ್ಷರಾಗಿ ಶಿವರಾಮ ಗೌಡ ಹೆಗ್ಗರಣಿ, ಕಾರ್ಯದರ್ಶಿಯಾಗಿ ಈಶ್ವರ ಮೊಗೆರ್ ಹಸರಗೋಡು ಆಯ್ಕೆಯಾಗಿರುತ್ತಾರೆ. ಕಾನಗೋಡು ಜಿ.ಪಂ. ಕ್ಷೇತ್ರದ ಉಪಾಧ್ಯಕ್ಷರಾಗಿ ಉದಯ ಚೌಡ ನಾಯ್ಕ, ಕಾರ್ಯದರ್ಶಿಯಾಗಿ ಮಂಜುನಾಥ ಮಾರುತಿ ಮಡಿವಾಳ, ಕಾನಸೂರು ಆಯ್ಕೆಯಾಗಿರುತ್ತಾರೆ. ನಗರ ಘಟಕದ ಉಪಾಧ್ಯಕ್ಷರಾಗಿ ಶನೇಶ್ವರ ಬಂಗಾರ್ಯ ಮಡಿವಾಳ ಹೊಸೂರು, ಕಾರ್ಯದರ್ಶಿಯಾಗಿ ಪವೀಣ ಬಿ. ನಾಯ್ಕ, ಕೊಂಡ್ಲಿ ಇವರುಗಳು ಆಯ್ಕೆಯಾಗಿರುತ್ತಾರೆ ಎಂದು ಕಾಂಗ್ರೆಸ್ ತಾಲೂಕಾ ಹಿಂದುಳಿದ ವರ್ಗಗಳ ವರ್ಗಗಳ ವಿಭಾಗದ ಅಧ್ಯಕ್ಷ ಗಂಗಾಧರ ಜಿ.ಮಡಿವಾಳ ಕಡಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top