ಕುಮಟಾ: ತಾಲೂಕಿನ ನೆರೆ ಪೀಡಿತ ಪ್ರದೇಶಗಳಲ್ಲಿ ತೆರೆಯಲಾದ ಕಾಳಿಜಿ ಕೇಂದ್ರಗಳಿಗೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಭಾರಿ ಪ್ರೊ.ಎಂ.ಜಿ.ಭಟ್ ಅವರು ಸಂತ್ರಸ್ತ ಕುಟುಂಬಗಳಿಗೆ ಫುಡ್ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದರು.
ಮಳೆಯ ಆರ್ಭಟಕ್ಕೆ ತಾಲೂಕಿನ ವಾಲಗಳ್ಳಿ ಗ್ರಾಪಂನ ಗುಡ್ನಕಟ್ಟಾ, ಕೂಜಳ್ಳಿ ಗ್ರಾಪಂನ ಕೋನಳ್ಳಿ ಮತ್ತು ಮೂರೂರಿನಲ್ಲಿ ನೆರೆ ಬಂದಿದ್ದು, ಸುಮಾರು 70ಕ್ಕೂ ಅಧಿಕ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಕೋನಳ್ಳಿ ಮತ್ತು ಊರಕೇರಿಯ ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಭಾರಿ ಪ್ರೊ. ಎಂ ಜಿ ಭಟ್ ಅವರು ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿ, ಸಾಂತ್ವನ ಹೇಳಿದರು. ಅಲ್ಲದೇ ಕಾಳಜಿ ಕೇಂದ್ರದಲ್ಲಿದ್ದ ಸಂತ್ರಸ್ತರಿಗೆ ಬಿಸ್ಕೇಟ್ ಪ್ಯಾಕ್ ಸೇರಿದಂತೆ ಫುಡ್ ಕಿಟ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದರು. ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾಲಗಳ್ಳಿ ಗ್ರಾಪಂ ಅಧ್ಯಕ್ಷ ಪ್ರಕಾಶ ಶಾನಭಾಗ, ಪ್ರಮುಖರಾದ ರಾಮಚಂದ್ರ ಮಡಿವಾಳ, ವಿಕ್ರಂ ಪುರೋಹಿತ, ಶಂಕರ ಅದಿಗುಂದಿ, ವೈಭವ ನಾಯ್ಕ, ವಿಷ್ಣು ನಾಯ್ಕ, ದತ್ತು ನಾಯ್ಕ, ಮಂಜುನಾಥ ನಾಯ್ಕ, ಕಮಲಾಕರ ನಾಯ್ಕ, ಮೂರ್ತಿ ನಾಯ್ಕ, ಪಿಡಿಒ ಕವಿತಾ ನಾಯಕ ಇತರರು ಇದ್ದರು.