Slide
Slide
Slide
previous arrow
next arrow

ಕೇಂದ್ರದ Western Ghat Ecologically Sensitive Area ಕರಡು ಅಧಿಸೂಚನೆಗೆ ಆಕ್ಷೇಪಣೆ

300x250 AD

ಬೆಂಗಳೂರು: ಇತ್ತೀಚೆಗೆ ಭಾರತ ಸರ್ಕಾರವು ಒಟ್ಟು ಐದು ರಾಜ್ಯಗಳ 56,825 ಕಿ.ಮೀ.ಪ್ರದೇಶವನ್ನು “Western Ghat Ecologically Sensitive Area” ಎಂದು ಕರಡು ಅಧಿಸೂಚನೆ ಹೊರಡಿಸಿದ್ದು, ಇದರಿಂದಾಗಿ ಕರ್ನಾಟಕ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಜೀವನಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಈ ಪ್ರದೇಶದ ಜನಜೀವನ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಭಾರತ ಸರ್ಕಾರದ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳೊಂದಿಗೆ ಪಶ್ಚಿಮ ಘಟ್ಟದ ಸಚಿವರು ಹಾಗೂ ಶಾಸಕರ ಸಭೆ ನಡೆಸಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಶಿವರಾಮ ಹೆಬ್ಬಾರ್, ಆನಂದ್ ಸಿಂಗ್, ಎಸ್. ಅಂಗಾರ, ಶಾಸಕರುಗಳಾದ ಬೋಪಯ್ಯ, ಸುನೀಲ್ ನಾಯ್ಕ್, ಎಂ.ಪಿ.ಕುಮಾರಸ್ವಾಮಿ, ಹರತಾಳ ಹಾಲಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜೇಗೌಡ, ಶ್ರೀಮತಿ ರೂಪಾಲಿ ನಾಯ್ಕ್, ಶ್ರೀಮತಿ ಅಂಜಲಿ ನಿಂಬಾಳ್ಕರ್, ಮಾಜಿ ಸಚಿವರು ಹಾಗೂ ಶಾಸಕರಾದ ಜೀವರಾಜ್ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top