• Slide
    Slide
    Slide
    previous arrow
    next arrow
  • ವಜ್ರಳ್ಳಿ ಗ್ರಾ.ಪಂ. ವಾರ್ಡ ಸಭೆ: ವಿವಿಧ ಯೋಜನೆ ಕುರಿತು ಗಂಭೀರ ಚರ್ಚೆ

    300x250 AD

    ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತದ ಹೊನ್ನಗದ್ದೆ ಶಾಲಾ ಆವಾರದಲ್ಲಿ ವಜ್ರಳ್ಳಿ ಗ್ರಾಮ ಪಂಚಾಯತ ದ ಪ್ರಸಕ್ತ ಸಾಲಿನ ಮೊದಲನೇ ಸುತ್ತಿನ ವಾರ್ಡ ಸಭೆಯು ಸ್ಥಳೀಯ ವಾರ್ಡ ಸದಸ್ಯ ಭಗೀರಥ ನಾಯ್ಕರವರ ಅಧ್ಯಕ್ಷತೆಯಲ್ಲಿ ಜರುಗಿತು.

    ಭಗೀರಥ ನಾಯ್ಕ ಮಾತನಾಡಿ ಸಾರ್ವಜನಿಕವಾಗಿ ಜನರ ಆಶಯಗಳಿಗೆ ಇದುವರೆಗೆ ಪ್ರಾಮಾಣಿಕವಾಗಿ ಸ್ಪಂದಿಸಿರುವೆ.ಹಂತ ಹಂತವಾಗಿ ಈ ಭಾಗವನ್ನು ಅಭಿವೃದ್ಧಿಪಡಿಸಲಾಗುವುದು, ಜನರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸುವುದು ನಮ್ಮ ಗುರಿ ಎಂದರು.

    ವಾರ್ಡಸಭೆಯಲ್ಲಿ ಕೃಷಿ ತೋಟದಲ್ಲಿನ ವಿದ್ಯುತ್ ಮಾರ್ಗ ಬದಲಾವಣೆಯ ಕುರಿತು ಶ್ರೀಪಾದ ಭಟ್ಟ,ಹೊನ್ನಗದ್ದೆ ಬಸ್ ಸಂಚಾರದ ಪುನರಾರಂಭ ಬಗ್ಗೆ ಡಿ.ಜಿ.ಭಟ್ಟ,,ವಜ್ರಳ್ಳಿ ಆಸ್ಪತ್ರೆ ಮೇಲ್ಛಾವಣಿಯ ಅವಶ್ಯಕತೆಯ ಕುರಿತು ಡಿ.ರವೀಂದ್ರ, ಕೈಗಾ ಅಣುಸ್ಥಾವರ ಸಿ ಎಸ್ ಆರ್ ಸಮಿತಿಯಿಂದ ಆಗುವ ಅಭಿವೃದ್ಧಿ ಬಗೆಗೆ ಶಂಕರ ಹೆಗಡೆ ಗಮನ ಸೆಳೆದರು.ಜೊತೆಗೆ ಇತ್ತೀಚೆಗೆ ಹೊಸದಾದ ಜಲಜೀವನ್ ಮಿಷನ್ನ್ ಕುರಿತು  ಭೌಗೋಳಿಕವಾಗಿ ಜನ ವಸತಿಕೇಂದ್ರದಿಂದ  ದೂರ ಹೆಚ್ಚಿರುವ ಕಾರಣ ಯೋಜನೆ ಅನುಷ್ಠಾನಗೊಳಿಸಲು ಕಷ್ಟವಾಗುತ್ತಿದೆ  ಎಂದು ಪಂಚಾಯತ ಸದಸ್ಯರಾದ ಗಜಾನನ ಭಟ್ಟ, ಕಳಚೆ ಅಭಿಪ್ರಾಯಪಟ್ಟರು. 

    300x250 AD

    ಸರ್ಕಾರದ  ವಿವಿಧ  ಯೋಜನೆಗಳ ಕುರಿತು ಸಭೆಯಲ್ಲಿ ಗಂಭೀರವಾದ ಚರ್ಚೆ  ನಡೆಯಿತು.ಫಲಾನುಭವಿಗಳ ಆಯ್ಕೆ, ಅಭಿವೃದ್ಧಿ ಯ ಬೇಡಿಕೆಯನ್ನು ಸಭೆಯಲ್ಲಿ ಸ್ವೀಕರಿಸಲಾಯಿತು. ಇತ್ತೀಚೆಗೆ ಈ ಭಾಗದ ಪ್ರದೇಶವನ್ನು ಒಳಗೊಂಡ ಕಸ್ತೂರಿ ರಂಗನ ಸಮಿತಿಯ ಶಿಫಾರಸ್ಸಿನ ಪರಿಸರ ವರದಿಯ ಪ್ರಕಾರ ಕೃಷಿ ತೋಟದಲ್ಲಿನ ಭೂಮಿಯ ಅಭಿವೃದ್ಧಿ ಬಗೆಗೆ ತೊಡಕಾಗುವ ಸಂಭವವಿದ್ದು ಈ ವರದಿಯನ್ನು ವಿರೋಧಿಸುವ ಠರಾವು ಮಂಡಿಸಿ ಸರ್ಕಾರಕ್ಕೆ ತಲುಪಿಸಬೇಕು ಎಂದು ವಾರ್ಡ ಸಭೆ ನಿರ್ಣಯಿಸಿತು. ಸಭೆಯಲ್ಲಿ ಗ್ರಾಮ ಪಂಚಾಯತದ ಅಧ್ಯಕ್ಷೆ ವೀಣಾ ಗಾಂವ್ಕಾರ, ಉಪಾಧ್ಯಕ್ಷೆ ರತ್ನಾ ಬಾಂದೇಕರ್, ಪಂಚಾಯತ ಸದಸ್ಯರಾದ ತಿಮ್ಮಣ್ಣ ಗಾಂವ್ಕಾರ, ಗಂಗಾ ಕೋಮಾರ, ಉಪಸ್ಥಿತರಿದ್ದರು. ವಾರ್ಡಸಭೆಯ ಆರಂಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.  ಸ.ಹಿ.ಪ್ರಾ ಶಾಲೆಯ ಮುಖ್ಯಾಧ್ಯಾಪಕ ಎಮ್ ವಿ ಭಟ್ಟ, ಕೊನೆಯಲ್ಲಿ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top