Slide
Slide
Slide
previous arrow
next arrow

ಕಾನೂನು,ಸರಕಾರದ ನಡವಳಿಕೆಗೆ ವ್ಯತಿರಿಕ್ತವಾಗಿ ನೋಟಿಸ್: ಎಸಿಎಫ್’ಗೆ ಆಕ್ಷೇಪಣ ಪತ್ರ ಸಲ್ಲಿಕೆ

300x250 AD

ಕುಮಟಾ: ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅತಿಕ್ರಮಣದಾರರಿಗೆ ಒಕ್ಕಲೆಬ್ಬಿಸಬಾರದೆಂಬ ಕಾನೂನಿನಲ್ಲಿ ಮತ್ತು ಸರಕಾರದ ನಡವಳಿಕೆಗೆ ವ್ಯತಿರಿಕ್ತವಾಗಿ ಕುಮಟಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರವು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅತಿಕ್ರಮಣದಾರರಿಗೆ ನೋಟಿಸ್ ನೀಡುತ್ತಿರುವ ಕ್ರಮಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಯಿತು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಇಂದು ಕುಮಟಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಯಿಂದ ಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಸಂಬಂಧಿಸಿ ಅತಿಕ್ರಮಣದಾರರಿಗೆ ನೋಟೀಸ್ ನೀಡುತ್ತಿರುವುದನ್ನು ಆಕ್ಷೇಪಿಸಿ ಎಸಿಎಫ್ ಗುರುದತ್ತ ಶೇಟ್ ಅವರಿಗೆ ಹೋರಾಟಗಾರರ ವೇದಿಕೆಯು ಇಂದು ಆಕ್ಷೇಪಣ ಪತ್ರ ನೀಡಿತು.

  ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದವರನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸದಂತೆ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ಹಾಗೂ ರಾಜ್ಯ ಸರಕಾರವು ಅರ್ಜಿ ಸಲ್ಲಿಸಿದವರ ಅರ್ಜಿಗಳು ಇತ್ಯರ್ಥ್ಯವಾಗುವವರೆಗೂ ನೋಟಿಸ್ ನೀಡದೇ, ತೊಂದರೆ ನೀಡದಂತೆ ಅಧಿಕಾರಿಗಳಿಗೆ ನಿರ್ಧೇಶನ ನೀಡಿದಾಗಿಯೂ ಕಾನೂನಾತ್ಮಕ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುತ್ತಿರುವುದಕ್ಕೆ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

300x250 AD

  ನಿಯೋಗದಲ್ಲಿ ಸಂಚಾಲಕ ಸೀತಾರಾಮ ನಾಯ್ಕ ಬೊಗ್ರಿಬೈಲ್, ಸಾರಂಬಿ ಬೆಟ್ಕುಳಿ, ಯಾಕೂಬ, ಯಂಕಪ್ಪ ಹರಿಕಂತ್ರ, ಫಾತಿಮಾ, ಶಬಿನಾ, ಐಶಾಬಿ, ತಿಪ್ಪಯ್ಯ, ರಾಧಾ ಗೌಡ ಉಂತಾದವರು ಉಪಸ್ಥಿತರಿದ್ದರು.

ಸರಕಾರ- ಸಚಿವರ ಆದೇಶ ಉಲ್ಲಂಘನೆ ;  ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಲು ನೋಟಿಸ್ ನೀಡಬಾರದೆಂಬ ಸರಕಾರದ ಸ್ಪಷ್ಟ ನಿರ್ದೇಶನ, ಸಚಿವರ ಸಭೆಯ ನಡವಳಿಕೆ ಇದ್ದಾಗಲೂ ಜಿಲ್ಲೆಯ ಅರಣ್ಯ ಅಧಿಕಾರಿಗಳು ಮಾನ್ಯತೆ ನೀಡದೆ ಉಲ್ಲಂಘಿಸಿರುವುದನ್ನು ಅಧ್ಯಕ್ಷ ರವೀಂದ್ರ ನಾಯ್ಕ ವಿಷಾದಿಸುತ್ತಾ, ಕಾನೂನು ಮತ್ತು ಸರಕಾರದ ನಿರ್ದೇಶನವನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಉಸ್ತುವಾರಿ ಸಚಿವರಿಗೆ ಅಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top