Slide
Slide
Slide
previous arrow
next arrow

ಬಂಕೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನೆ

300x250 AD

ಶಿರಸಿ: ವಿದ್ಯಾರ್ಥಿ ಸಂಸತ್ ಮುಂತಾದ ಸಂಘಟನೆಗಳಿಂದ ನಮ್ಮಲ್ಲಿ ನಾಯಕತ್ವಗುಣ ಬೆಳೆಯುತ್ತದೆ. ನಮ್ಮಲ್ಲಿ ಅಗಾಧ ಪ್ರತಿಭೆಗಳಿರುವಂತ ಮಕ್ಕಳಿದ್ದಾರೆ. ಅವರ ಪ್ರತಿಭೆ ಹೊರಗೆ ಬರಬೇಕೆಂದರೆ ನಮ್ಮಲ್ಲಿ ಅಂಜಿಕೆ ಇರಬಾರದು. ಪಠ್ಯ ಜ್ಞಾನದೊಂದಿಗೆ ಪಠ್ಯತರ ಜ್ಞಾನವನ್ನು ಹೆಚ್ಚು ಸಂಪಾದಿಸಬೇಕು ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಭೂಮೇಶ ಎ.ಎಚ್ ಹೇಳಿದರು.

300x250 AD

ಅವರು ಹೊಸುರಿನ ಬಂಕೇಶ್ವರ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರ ಮಾತನ್ನು ಚಾಚುರಪ್ಪದೇ ಕೇಳಿದರೆ ಮುಂದೆ ನಮ್ಮ ಬಾಳು ಸುಂದರವಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಅಧ್ಯಕ್ಷ ಕೆ.ಅಜ್ಜಪ್ಪ ಮಾತನಾಡಿ, ನಾವು ಕೇವಲ ನೌಕರಿಗಾಗಿ ಓದದೆ ನಿಮ್ಮಭದ್ರ ಜೀವನಕ್ಕಾಗಿ ಓದಬೇಕು. ವಿದ್ಯಾರ್ಥಿ ಪ್ರಾರಂಭದಿಂದಲೇ ಕಷ್ಟ ಪಟ್ಟು ಓದಬೇಕು. ಆವಾಗ ನಮ್ಮ ಗುರಿ ಈಡೇರುತ್ತದೆ ಸನ್ಮಾನಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಮನುಷ್ಯನಿಗೆ ಹಠ ಛಲ ಇರಬೇಕು. ಅಂದಾಗ ಮಾತ್ರ ನಾವು ಅಂದುಕೊಂಡಂತೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು. 2021-22 ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೆ ಸ್ಥಾನ ಗಳಿಸಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದ ಪವಿತ್ರ ನಾಯ್ಕ, ಶಾಲೆಗೆ ದ್ವಿತೀಯ ಸ್ಥಾನ ಪಡೆದ ಸಂಜನಾ ಶೇಟ್, ತೃತೀಯ ಸ್ಥಾನ ಪಡೆದ ರಾಘವೇಂದ್ರ ನಾಯ್ಕ ರವರನ್ನು ಸನ್ಮಾನಿಸಲಾಯಿತು, ಪತ್ರಕರ್ತರ ಸುರೇಶ ಮಾಡಿವಾಳ ಕಡಕೇರಿ, ಸೊರಬ ಗ್ರಾ. ಪಂ ಸದಸ್ಯರಾದ ಶಿವಕುಮಾರ, ವಿದ್ಯಾರ್ಥಿ ಸಂಸತ್ತಿನ ಪ್ರತಿನಿಧಿ ಯಶೋಧರ ಎಸ್ ನಾಯ್ಕ ವೇದಿಕೆಯಲ್ಲಿದ್ದರು.ಶಿಕ್ಷಕ ಎಮ್ ಬಿ ನಾಯ್ಕ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯೋದ್ಯಾಪಕರಾದ ಲೋಕೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಶಿಕ್ಷಕ ಟಿ.ಸಿ. ನಾಯ್ಕನಿರೂಪಿಸಿದರು.ಶಿಕ್ಷಕ ವಿ. ಟಿ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top