Slide
Slide
Slide
previous arrow
next arrow

ಜಾನುವಾರುಗಳ ಆರೈಕೆಯಿಂದ ಮೆಚ್ಚುಗೆಗೆ ಪಾತ್ರವಾದ ಯುವಕರ ತಂಡ

300x250 AD

ಕಾರವಾರ: ಯುವಕರ ತಂಡವೊಂದು ಚತುಷ್ಪಥ ಹೆದ್ದಾರಿಯಲ್ಲಿ ಅಪಘಾತವಾಗಿ ಬಿದ್ದು ಸಾವು-ಬದುಕಿನ ನಡುವೆ ಒದ್ದಾಡುತ್ತಿರುವ ಜಾನುವಾರುಗಳನ್ನು ಆರೈಕೆ ಮಾಡಿ ಔಷಧೋಪಚಾರ ನಡೆಸಿ ಪ್ರಾಣಿ ಪ್ರಿಯರ ಮೆಚ್ಚುಗೆ ಗಳಿಸುತ್ತಿದ್ದಾರೆ.

ಅಲಗೇರಿಯ ಗ್ರಾಮ ಪಂಚಾಯತ್‌ನಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ ನಾಯ್ಕ್ ಮತ್ತು ಅವರ ಗೆಳೆಯರ ಬಳಗ ಈ ರೀತಿಯ ಆರೈಕೆ ಮಾಡಿ ಮಾನವೀಯತೆ ಮೆರೆಯುತ್ತಿದೆ.ಚತುಷ್ಪಥ ಹೆದ್ದಾರಿಯಲ್ಲಿ ವಾಹನ ಸಾಗಾಟ ಹೆಚ್ಚಿರುವುದರಿಂದ ರಾತ್ರಿ ವೇಳೆಯಲ್ಲಿ ದನಕರುಗಳಿಗೆ ಅಪಘಾತ ಪಡಿಸಿ ವಾಹನಗಳು ಸಾಗುತ್ತಿರುತ್ತವೆ. ಈ ಸಂದರ್ಭದಲ್ಲಿ ಅಪಘಾತವಾಗಿ ಸಾಕು ಪ್ರಾಣಿಗಳು ಅನಾಥವಾಗಿ ಬಿದ್ದಿರುತ್ತವೆ. ಇಂತಹ ಸಂದರ್ಭದಲ್ಲಿ ಸಾಕು ಪ್ರಾಣಿಗಳ ಮಾಲಕರು ಬರುವುದಿಲ್ಲ.

300x250 AD

ಇಂತಹ ಜಾನುವಾರುಗಳನ್ನು ಪ್ರೀತಿಯಿಂದ ಆರೈಕೆ ಮಾಡಿ, ಔಷದೋಪಚಾರಕ್ಕೆ ತಾವೇ ಹಣ ಹೊಂದಿಸಿಕೊಂಡು ಈ ಹಸುಗಳು ತೊಂದರೆಯಲಿದ್ದಾಗ ಕಾರವಾರದ ಗೋ ಶಾಲೆಗೆ ಬಿಟ್ಟು ಬಂದು ಮೇಲಿಂದ ಮೇಲೆ ಇವು ಹೇಗಿದ್ದಾವೆ, ಎಂದು ವಿಚಾರಿಸುವ ಯುವಕರು ಪ್ರಾಣಿ ಪ್ರೀತಿಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈವರೆಗೆ ಹಲವಾರು ಜಾನುವಾರುಗಳನ್ನು ಆರೈಕೆ ಮಾಡಿ ಸಮಸ್ಯೆ ಇರುವ ಪ್ರಾಣಿಗಳನ್ನು ಕಾರವಾರದ ಗೋ ಶಾಲೆಗೆ ಬಿಟ್ಟು ಬಂದಿರುತ್ತಾರೆ. ವಂದಿಗೆ ಗ್ರಾಪಂ ಕಾರ್ಯಾಲಯದ ಮುಂದೆ ಒಂದು ಹಸು ಕಳೆದೆರಡು ದಿನದ ಹಿಂದೆ ಅಪಘಾತವಾಗಿ ಬಿದ್ದಿತ್ತು.ಗ್ರಾಪಂ ಕಚೇರಿಯ ಮುಂದಿರುವ ಕಟ್ಟಡಕ್ಕೆ ಹಸುವನ್ನು ಈ ವೈದ್ಯರನ್ನು ಕರೆಯಿಸಿ ಔಷಧೋಪಚಾರ ಮಾಡಿಸಿ ಕರ್ತವ್ಯ ಮೆರೆದ ಈ ಯುವಕರ ತಂಡದಲ್ಲಿ ಭಜರಂಗ ದಳದ ಕಿರಣ ನಾಯ್ಕ ಸಾಮಾಜಿಕ ಕಾರ್ತಕರ್ತ ಮಂಗೇಶ್ ನಾಯ್ಕ ಹಟ್ಟಿಕೇರಿ, ವಂದಿಗೆ ಗ್ರಾ.ಪಂ. ಸಿಬ್ಬಂದಿಗಳಾದ ನಾಗೇಂದ್ರ ಗೌಡ, ಶ್ರೀಧರ ನಾಯಕ ಇದ್ದಾರೆ. ಈ ಯುವಕರ ಕರ್ತವ್ಯಕ್ಕೆ ವಂದಿಗೆ ಗ್ರಾಮ ಪಂಚಾಯತ್‌ನವರು ಅಭಿನಂದಿಸಿದ್ದಾರೆ. ಈ ಹಸುವಿನ ಆರೈಕೆ ಮಾಡುವ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪುಷ್ಪಲತಾ ನಾಯಕ, ಉಪಾಧ್ಯಕ್ಷ ಪುಟ್ಟು ಬುಮ್ಮಿಗುಡಿ, ಪಿ ಡಿ ಓ ಗೀರಿಶ್ ನಾಯಕ,ಮತ್ತಿತರರಿದ್ದರು.

Share This
300x250 AD
300x250 AD
300x250 AD
Back to top