• Slide
    Slide
    Slide
    previous arrow
    next arrow
  • ಅಂಕೋಲಾ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ

    300x250 AD

    ಅಂಕೋಲಾ: ಸಮಾಜ ಸೇವೆಯಲ್ಲಿ ಅಗ್ರಗಣಿಯಾಗಿರುವ, ತನ್ನ ಸಾರ್ಥಕ ಸಮಾಜೋನ್ನತಿಯ ಕಾರ್ಯದಲ್ಲಿ ಬೆಳ್ಳಿಹಬ್ಬದ ಆಚರಣೆಯಲ್ಲಿರುವ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಈ ಸಾಲಿನ ಪದಾಧಿಕಾರಿಗಳ ಆಯ್ಕೆ ಸರ್ವ ಸಮ್ಮತಿಯಿಂದ ಮಾಡಲಾಗಿದೆ.

    ಸಮಾಜಮುಖಿ ಕಾರ್ಯಗಳಿಗೆ ಪ್ರಶಂಸೆ ಹಾಗೂ ಪ್ರಶಸ್ತಿ ಗಳಿಸಿರುವ 2022-23ನೇ ಸಾಲಿನ ಲಾಯನ್ಸ್ ಕ್ಲಬ್ ಕರಾವಳಿಯ ಅಧ್ಯಕ್ಷರಾಗಿ ಹಿರಿಯ ವ್ಯಾಪಾರಸ್ಥ ಗಣೇಶ ಶೆಟ್ಟಿ, ಕಾರ್ಯದರ್ಶಿಯಾಗಿ ಶಿಕ್ಷಕ ಜಿ.ಆರ್.ತಾಂಡೇಲ, ಖಜಾಂಚಿಯಾಗಿ ನಿವೃತ್ತ ಮುಖ್ಯಾಧ್ಯಾಪಕ ಹಸನ್ ಶೇಖ್ ಆಯ್ಕೆಯಾಗಿದ್ದಾರೆ.

    ಈ ಸಾಲಿನ ಪ್ರಥಮ ಉಪಾಧ್ಯಕ್ಷರಾಗಿ ದೇವಾನಂದ ಗಾಂವಕರ, ದ್ವಿತೀಯ ಉಪಾಧ್ಯಕ್ಷರಾಗಿ ರಮೇಶ ಪರಮಾರ, ಸದಸ್ಯತ್ವ ಅಭಿಯಾನ ಕಮೀಟಿಯ ಮುಖ್ಯಸ್ಥರಾಗಿ ಸದಾನಂದ ಶೆಟ್ಟಿ, ಸುಧೀರ ನಾಯ್ಕ (ಕ್ಲಬ್ ಮಾರ್ಕೆಟಿಂಗ್), ಸಂತೋಷ ಸಾಮಂತ್ (ಕ್ಲಬ್ ಕಮ್ಯುನಿಕೇಶನ್), ಮಂಜುನಾಥ ನಾಯಕ (ಕ್ಲಬ್ ಸರ್ವಿಸ್), ಸಂಜಯ ಅರುಂಧೇಕರ (ಎಲ್.ಸಿ.ಆಯ್.ಎಫ್ ಕೊವಾರ್ಡಿನೆಟರ್), ಶ್ರೀನಿವಾಸ ನಾಯಕ (ಕ್ಲಬ್ ಎಡ್ಮಿನಿಸ್ಟೇಟರ್), ಓಂ ಪ್ರಕಾಶ ಪಟೇಲ (ಇವೆಂಟ್ ಮ್ಯಾನೇಜರ್), ಚಂದನಸಿಂಗ್

    300x250 AD

    (ಪ್ಲಾನಿಂಗ್), ವಿವೇಕ ಸಾಮಂತ (ಹಾಸ್ಟಿಟ್ಯಾಲಿಟಿ), ಸತೀಶ ನಾಯ್ಕ (ಟೇಮರ್), ಚೈನ್‌ಸಿಂಗ್ (ಟೇಲ್ ಟ್ವಿಸ್ಟರ್) ಆಗಿ ಆಯ್ಕೆಯಾಗಿದ್ದಾರೆ. ಕ್ಲಬ್ ಸೇವಾ ಸಮಿತಿಯ ನಿರ್ದೇಶಕರಾಗಿ ಕೆ.ವಿ.ಶೆಟ್ಟಿ, ಸುಬ್ರಹ್ಮಣ್ಯ ಉಡುಪಿ, ಗಣಪತಿ ನಾಯಕ, ಮಹಾಂತೇಶ ರೇವಡಿ, ಸಂಜಯ ಅರುಂಧೇಕರ, ಶಂಕರ ಹುಲಸ್ವಾರ, ಕೇಶವಾನಂದ ನಾಯಕ, ಗಿರಿಧರ ಆಚಾರ್ಯ, ಡಾ.ನರೇಂದ್ರ ನಾಯಕ ನೇಮಿಸಲ್ಪಟ್ಟಿದ್ದಾರೆ.

    ಜು.19ರಂದು ಬೆಳಿಗ್ಗೆ 11 ಗಂಟೆಗೆ ಅಂಕೋಲಾದ ಪಿ.ಎಂ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಲಾಯನ್ಸ್ 317ಬಿ ಯ ದ್ವಿತೀಯ ಪ್ರಾಂತಪಾಲಕ ಮನೋಜ ಮಾಣಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿಧಾನಪರಿಷತ್ತಿನ ಸದಸ್ಯ ಗಣಪತಿ ಉಳ್ವೇಕರ ಆಗಮಿಸಲಿದ್ದಾರೆ. ಕಳೆದ ವರ್ಷ ಲಾಯನ್ಸ್ ಕ್ಲಬ್‌ನ್ನು ಯಶಸ್ವಿಯಾಗಿ ಮುನ್ನಡೆಸಿದ ಅಧ್ಯಕ್ಷ ಡಾ.ಕರುಣಾಕರ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ಲಾಯನ್ಸ್ ಮಹಾಂತೇಶ ರೇವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top