Slide
Slide
Slide
previous arrow
next arrow

ವಿಪತ್ತು ಮಿತ್ರ ತರಬೇತಿ ಪಡೆದ ರೋವರ್ಸ್- ರೇಂಜರ್ಸ್

300x250 AD

ಶಿರಸಿ: ತಾಲೂಕಿನ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ 12 ದಿನದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಯೋಜನೆಯಾದ ವಿಪತ್ತು ಮಿತ್ರ ತರಬೇತಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಶೈಕ್ಷಣಿಕ ಜಿಲ್ಲೆ ಸಿದ್ದಾಪುರ, ಯಲ್ಲಾಪುರ ತಾಲೂಕಿನ ಪ್ರಥಮ ದರ್ಜೆ ಕಾಲೇಜುಗಳಿಂದ ಒಟ್ಟು 25 ರೋವರ್ಸ್- ರೇಂಜರ್ಸ್ ಗಳು ಭಾಗವಹಿಸಿದರು.

ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 5 ರೋವರ್ಸ್, 4 ರೇಂಜರ್ಸ್, ಎಮ್.ಎಮ್ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯ (ಎಮ್‌ಇಎಸ್)ದಿಂದ ಓರ್ವ ರೋವರ್ಸ್, 4 ರೇಂಜರ್ಸ್, ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 8 ರೋವರ್ಸ್, ಸಿದ್ದಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 3 ರೋವರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

12 ದಿನದ ಈ ತರಬೇತಿಯಲ್ಲಿ ಬೆಂಕಿ ಅವಘಡ, ನೀರಿನ ಪ್ರವಾಹ, ಭೂ/ಮನೆ ಕುಸಿತವಾದಾಗ ಹೇಗೆ ಕಾರ್ಯ ಕೈಗೊಳ್ಳಬೇಕು ಎಂಬ ಮಾಹಿತಿ ನೀಡುವುದರ ಜೊತೆಗೆ ಪ್ರಥಮ ಚಿಕಿತ್ಸೆ, ಬ್ಯಾಂಡೆಜ್, ಅಗ್ನಿಶಾಮಕ ವಾಹನದ ವಿವರಣೆಯನ್ನು ತಿಳಿಸಿದರು. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ನು, ಪಟ್ಟಿ ಹಾಗೂ ವಿಪತ್ತು ಮಿತ್ರ ಕೈಪಿಡಿಯನ್ನು ಕೊಟ್ಟು ಬೀಳ್ಕೊಟ್ಟರು.

300x250 AD

ಈ ತರಬೇತಿಯಲ್ಲಿ ರೋವರ್ಸ್- ರೇಂಜರ್ಸ್ಗಳಿಗೆ ಭಾಗವಹಿಸಲು ಸಹಾಯಕ ರಾಜ್ಯ ಸಂಘಟನಾ ಆಯುಕ್ತ ವೀರೇಶ ಮಾದರ ಅವರು ಮಾರ್ಗದರ್ಶನ ಮಾಡಿದರು ಹಾಗೂ ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಶುಭಕೋರಿದರು.

Share This
300x250 AD
300x250 AD
300x250 AD
Back to top