ಶಿರಸಿ: ಮುಂಬೈ ಐಐಟಿಯಿಂದ ಪದವಿ ಪಡೆದ ಶಿರಸಿಯ ಯುವತಿಯೊಬ್ಬರು ಫರಿದಾಬಾದನ ತಸ್ಟೀ ಸಂಸ್ಥೆಯಲ್ಲಿ ಕ್ಯಾನ್ಸರ್ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಪಡೆದು ದೇಶದ ಗಮನ ಸೆಳೆದಿದ್ದಾರೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಡಿಬಿಟಿ ಗೌರವ ಕಾರ್ಯದರ್ಶಿ ಡಾ. ರಾಜೇಶ ಗೋಖಲೆ ಹಾಗೂ ಎನ್ ಐಟಿಐ ಸದಸ್ಯ ವಿನೋದ್ ಪೌಲ್ ಎದುರು ವಿಷಯ ಕ್ಯಾನ್ಸರ ಕುರಿತು ವಿಶೇಷವಾಗಿ ಪ್ರಬಂಧ ಮಂಡಿಸಿ ನಾರಾಯಣಗುರು ನಗರದ ಸುಗಂಧ ನಾರಾಯಣ ನಾಯ್ಕ ಈ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಸುಗಂಧ ಅವರು ಶಿರಸಿಯಲ್ಲಿ ವಾಯುವ್ಯ ಸಾರಿಗೆ ನೌಕರರಾಗಿದ್ದ ದಿ.ನಾರಾಯಣ ನಾಯ್ಕ ಹಾಗೂ ನಗರದ ಮೂರನೆ ನಂಬರ್ ಶಾಲಾ ಶಿಕ್ಷಕಿ ಶಶಿಕಲಾ ನಾಯ್ಕ ಅವರ ಮಗಳು ಎಂಬುದು ಉಲ್ಲೇಖನೀಯ.