Slide
Slide
Slide
previous arrow
next arrow

ಪತ್ರಕರ್ತ ಪ್ರದೀಪ ಶೆಟ್ಟಿಗೆ ‘ಮಾಧ್ಯಮಶ್ರೀ’ ಪ್ರಶಸ್ತಿ

300x250 AD

ಶಿರಸಿ: ಕಳೆದ 25 ವರ್ಷಗಳಿಂದ ಶಿರಸಿ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕನ್ನಡ ಜನಾಂತರಂಗ ವರದಿಗಾರ ಪ್ರದೀಪ ಶೆಟ್ಟಿ ಅವರಿಗೆ 2022 ನೇ ಸಾಲಿನ ಮಾಧ್ಯಮ ಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. 

ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರಶಸ್ತಿಯು 3 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಪ್ರದೀಪ ಶೆಟ್ಟಿ ಅವರು ಪತ್ರಿಕೋದ್ಯಮಕ್ಕೆ ನೀಡಿದ ಸೇವೆಗಾಗಿ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ಹಾಗೂ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ಅವರು ಪ್ರಶಸ್ತಿ ಪ್ರಕಟಿಸಿದ್ದಾರೆ. 

ಕರಾವಳಿ ಸುಪ್ರಭಾತ , ವಿಜಯ ಕರ್ನಾಟಕ ,  ಜನಮಾಧ್ಯಮ ಪತ್ರಿಕೆಯಲ್ಲಿ ಕೆಲಸ ಮಾಡಿ ಕಳೆದ 20 ವರ್ಷಗಳಿಂದ  ಕನ್ನಡ ಜನಾಂತರಂಗದಲ್ಲಿ ಶಿರಸಿ ವರದಿಗಾರರಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2003 ರಲ್ಲಿ ರೋಟರಿಯಿಂದ  ಕ್ರೀಯಾಶೀಲ ಪತ್ರಕರ್ತರೆಂದು ಸಾರ್ವಜನಿಕ ಸಂಮಾನ ಮಾಡಲಾಗಿದೆ. ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯರಾಗಿಯೂ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮೂರು ಬಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆ ಮಾಡಿರುವ ಹೆಗ್ಗಳಿಕೆ ಅವರದ್ದಾಗಿದೆ. 

300x250 AD

ಮೈಸೂರಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಪ್ರದೀಪ ಶೆಟ್ಟಿಯವರು ತಮ್ಮ ಸಾಮಾಜಿಕ ಕೆಲಸದಿಂದಲೂ ಶಿರಸಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸರ್ಕಸ್ ಕಂಪನಿ, ನಾಟಕ ಕಂಪನಿಯವರಿಗೆ ದಿನನಿತ್ಯದ ವಸ್ತುಗಳನ್ನು ಒದಗಿಸಿಕೊಡುವಲ್ಲಿ ಅವರ ಪಾತ್ರ ಮಹತ್ವದ್ದಿದೆ. ಈ ಎಲ್ಲಾ ಕಾರ್ಯದಿಂದ ಅವರಿಗೆ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಸಮ್ಮಾನಿಸಲಾಗುತ್ತಿದೆ.

Share This
300x250 AD
300x250 AD
300x250 AD
Back to top