Slide
Slide
Slide
previous arrow
next arrow

ರೋಟರಿ ಕ್ಲಬ್’ನಿಂದ ವನಮಹೋತ್ಸವ ಆಚರಣೆ

300x250 AD

ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ಪೊಲೀಸ್ ಹೆಡ್ ಕ್ವಾಟ್ರಸ್, ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಫಲ ನೀಡುವ ಸಸಿ ಹಾಗೂ ಇನ್ನಿತರ ಹೂವಿನ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.

ರೋಟರಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಎಲ್ಲರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ರೋಟರಿ ಸಂಸ್ಥೆಯು ಪ್ರತೀ ವರ್ಷವೂ ವಿವಿಧ ಕಡೆಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರದ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದರು. ಗಿಡಗಳನ್ನು ತರುವಲ್ಲಿ ಸಹಕರಿಸಿದ ಹಿರಿಯ ಸಾತಪ್ಪಾ ತಾಂಡೇಲರವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆ ಮುಖ್ಯೋಧ್ಯಾಪಕಿ ಸಂಜೀವಿನಿ ನಾಯಕ ಅವರು ವನಮಹೋತ್ಸವಕ್ಕೆ ಹಾಜರಿದ್ದ ಎಲ್ಲಾ ರೋಟೇರಿಯನ್ ಹಾಗೂ ಇನ್ನರ್‌ವ್ಹೀಲ್ ಸದಸ್ಯರನ್ನು ಸ್ವಾಗತಿಸುತ್ತ ತಮ್ಮ ಶಿಷ್ಯರಾದ ರಾಘವೇಂದ್ರ ಜಿ.ಪ್ರಭು ಹಾಗೂ ಪ್ರಶಾಂತ ಮಾಂಜ್ರೇಕರ ಅವರನ್ನು ಸ್ಮರಿಸಿದರು. ಗುರುಪೂರ್ಣಿರ್ಮೆಯ ನಿಮಿತ್ತ ಅಧ್ಯಕ್ಷ ರಾಘವೇಂದ್ರ ಪ್ರಭುರವರು ರೋಟರಿ ಸಂಸ್ಥೆಯ ಪರವಾಗಿ ಸಂಜೀವಿನಿ ನಾಯಕರವರನ್ನು ಸನ್ಮಾನಿಸಿದರು.

300x250 AD

ಈ ಸಂದರ್ಭದಲ್ಲಿ ಪಿ.ವಿ.ಪ್ರಜೀತ ಶಾಲೆಗೆ ಹೊಸ ಕಂಪ್ಯೂಟರ್ ಒಂದನ್ನು ದಾನವಾಗಿ ನೀಡಿದರು. ಡಾ.ಸಮೀರಕುಮಾರ ನಾಯಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ಮಾಡಿದರು. ಗುರುದತ್ತ ಬಂಟ ವಿದ್ಯಾರ್ಥಿಗಳಿಗೆ ಟೂತ್‌ಪೇಸ್ಟ್ ಹಾಗೂ ಟೂತ್ ಬ್ರಶ್‌ಗಳನ್ನು ನೀಡಿದರು. ಈ ಸಂದರ್ಭದಲ್ಲಿ ವಿನೋದ ಪಾವಸ್ಕರ ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ ಬೇಕಾಗುವಷ್ಟು ತಾಟು ಹಾಗೂ ಲೋಟಗಳನ್ನು ಕೊಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪ್ರಸನ್ನ ತೆಂಡೂಲ್ಕರ ಹಾಗೂ ಅರ್ಚನಾ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು, ಬಿಇಓ ಸಂಯೋಜಕಿ ಸುಜಾತಾ ಜಾವಕರ, ಎಸ್‌ಡಿಎಂಸಿ ಅಧ್ಯಕ್ಷೆ ಆಶಾ ಡಿ.ನಾಯ್ಕ ಹಾಗೂ ಸದಸ್ಯರು, ಇನ್ನರ್‌ವ್ಹೀಲ್ ಅಧ್ಯಕ್ಷೆ ಸೋನಾ ಫರ್ನಾಂಡಿಸ್ ಹಾಗೂ ಸದಸ್ಯರು, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಎಲ್.ಎಸ್.ಫರ್ನಾಂಡಿಸ್ ನಡೆಸಿಕೊಟ್ಟರು.

Share This
300x250 AD
300x250 AD
300x250 AD
Back to top