• first
  second
  third
  previous arrow
  next arrow
 • ವೈಟಿಎಸ್‌ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ

  300x250 AD

  ಯಲ್ಲಾಪುರ: ವೈಟಿಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆದು ಮಿಥುನ್ ನಾಯ್ಡು ಬಾಲಕರ ವಿದ್ಯಾರ್ಥಿ ಪ್ರತಿನಿಧಿಯಾಗಿ ಹಾಗೂ ವೈಷ್ಣವಿ ಹೆಗಡೆ ಬಾಲಕಿಯರ ವಿದ್ಯಾರ್ಥಿ ಪ್ರತಿನಿಧಿಯಾಗಿ ಆಯ್ಕೆಯಾದರು.

  ಬಾಲಕರ ಸಾಂಸ್ಕೃತಿಕ ಪ್ರತಿನಿಧಿಯಾಗಿ ಸುಭಾಸ್ ಹೆಗಡೆ, ಬಾಲಕಿಯರ ಸಾಂಸ್ಕೃತಿಕ ಪ್ರತಿನಿಧಿಯಾಗಿ ಸ್ನೇಹಾ ಶಾನಭಾಗ್, ಬಾಲಕರ ಕ್ರೀಡಾ ಪ್ರತಿನಿಧಿಯಾಗಿ ಸಾಯೀಮ್ ಶೇಖ್, ಬಾಲಕಿಯರ ಕ್ರೀಡಾ ಪ್ರತಿನಿಧಿಯಾಗಿ ಎ.ಎನ್.ವಸುಂಧರಾ ಆಯ್ಕೆಯಾದರು.

  ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆಯನ್ನು ನಡೆಸಲಾಯಿತು. ಪ್ರಾಂಶುಪಾಲರಾದ ವಾಣಿಶ್ರೀ ಹೆಗಡೆ ಮಾರ್ಗದರ್ಶನದಲ್ಲಿ ಉಪನ್ಯಾಸಕರಾದ ಆನಂದ್ ಹೆಗಡೆ ಚುನಾವಣಾ ಅಧಿಕಾರಿಯಾಗಿ ಹಾಗೂ ಎಲ್ಲ ಉಪನ್ಯಾಸಕರು ಮತದಾನ ಅಧಿಕಾರಿಗಳಾಗಿ ಚುನಾವಣಾ ಕಾರ್ಯವನ್ನು ನಡೆಸಿಕೊಟ್ಟರು.

  300x250 AD

  ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿ ಶಾನಭಾಗ ಹಾಗೂ ಎಲ್ಲ ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top