Slide
Slide
Slide
previous arrow
next arrow

ಸಿ.ಎ.ಪರೀಕ್ಷೆ:ಮೊದಲ ಪ್ರಯತ್ನದಲ್ಲೇ ನಿಧಿ ಶೆಟ್ಟಿ ತೇರ್ಗಡೆ

300x250 AD

ಶಿರಸಿ: ತಾಲೂಕಿನ ದಾಸನಗದ್ದೆಯ ನಿಧಿ ಶೆಟ್ಟಿ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗುವ ಮೂಲಕ ಅಪ್ರತಿಮ ಸಾಧನೆಗೈದಿದ್ದಾರೆ.

ಇವರು ದಾಸನಗದ್ದೆಯ ಶ್ರೀಮತಿ ಸೀಮಾ ಮತ್ತು ಸುರೇಶ್ ಶೆಟ್ಟಿ ಇವರ ಪುತ್ರಿಯಾಗಿದ್ದು,ದಾಸನಗದ್ದೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಮತ್ತು ಶಿರಸಿಯ ಲಯನ್ಸ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ ನಗರದ M E S ನಲ್ಲಿ P U ಶಿಕ್ಷಣವನ್ನು ಪೂರೈಸಿ ಬೆಂಗಳೂರಿನ ಗುರು ಎಂಡ್ ಜನ್ ಫರ್ಮನಲ್ಲಿ ಆರ್ಟಿಕಲ್ ಶಿಪ್ ಮುಗಿಸಿದ್ದರು.

ಸತತ ಪ್ರಯತ್ನ ಮತ್ತು ಆತ್ಮವಿಶ್ವಾಸ ಯಾವುದೇ ಒಂದು ಕಾರ್ಯಸಿದ್ದಿಗೆ ಕಾರಣ ಎನ್ನುವ ನಿಧಿ ,ತನ್ನ ಯಶಸ್ಸಿಗೆ ತಂದೆ ತಾಯಿಯರ ಪ್ರೋತ್ಸಾಹ ಮತ್ತು ಗುರು ಹಿರಿಯರ ಮಾರ್ಗದರ್ಶನ ಮುಖ್ಯ ಕಾರಣ ಎನ್ನುತ್ತಾರೆ.

300x250 AD

ಚಿಕ್ಕಂದಿನಿಂದಲೂ ಪ್ರತಿಭಾವಂತೆಯಾದ ನಿಧಿ ಇವರಿಗೆ ಸಂಗೀತ ಮತ್ತು ಡ್ರಾಯಿಂಗ್ ನಲ್ಲಿಯೂ ಅತೀವ ಆಸಕ್ತಿ ಇದೆ. ಪ್ರಕೃತಿ ಮತ್ತು ಸಸ್ಯಗಳ ಬಗ್ಗೆ ಪ್ರೀತಿ ಮತ್ತು ಕಾಳಜಿ ಹೊಂದಿರುವ ನಿಧಿಯವರ ಜೀವನ ಉಜ್ವಲ ಮತ್ತು ಯಶಸ್ವಿಯಾಗಲಿ ಎಂದು ಪಾಲಕರು, ಊರ ಹಿರಿಯರು ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top