• Slide
    Slide
    Slide
    previous arrow
    next arrow
  • ಕಲಾವಿದ ಪರಮೇಶ್ವರ ಹೆಗಡೆ ತಾರೇಸರ ಇನ್ನಿಲ್ಲ

    300x250 AD

    ಶಿರಸಿ: ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದ  ಕಲಾಸೇವೆ ಮಾಡುತ್ತ ಬಂದಿದ್ದ ಹಿರಿಯ ಕಲಾವಿದ ಪರಮೇಶ್ವರ ಹೆಗಡೆ ತಾರೇಸರ ಇಹಲೋಕ ತ್ಯಜಿಸಿದರು.

    ಯಕ್ಷಗಾನ ಹಿಮ್ಮೇಳದ ಮದ್ದಲೆ ವಾದಕರಾಗಿ ಹೆಸರು ಮಾಡಿದ ಅವರು ಅಕಾಲಿಕವಾಗಿ ನಿಧನ ಹೊಂದಿದರು. ತಮ್ಮ ಊರಿನ ತೋಟದ ಸಂಕ ದಾಟುವಾಗ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ತೇಲಿ ಹೋದ ಅವರು ನಂತರ ಶವವಾಗಿ ಪತ್ತೆಯಾಗಿದ್ದಾರೆ.

    ಶಿರಸಿ,ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಾಗೂ ಪರಜಿಲ್ಲೆಗಳಲ್ಲಿ ಕೂಡ ಅವರು ಮದ್ದಲೆ ವಾದನದ ಮೂಲಕ ಯಕ್ಷ ಕಲಾಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದಿದ್ದರು.

    300x250 AD

    ಪರಮೇಶ್ವರ ಹೆಗಡೆ ಅವರ ನಿಧನವು ಯಕ್ಷರಂಗಕ್ಕೆ ಆಘಾತಕಾರಿ ವಿಷಯವಾಗಿದ್ದು,ಅವರ ನಿಧನಕ್ಕೆ ಅನೇಕ ಯಕ್ಷಗಾನ ಕಲಾವಿದರು ಹಾಗೂ ಯಕ್ಷ ಸಂಘಟನೆಗಳು ದುಃಖ ವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top