Slide
Slide
Slide
previous arrow
next arrow

ವಿಆರ್‌ಡಿಎಮ್ ಟ್ರಸ್ಟ್’ನಿಂದ ಸ್ಕಾಲರ್‌ಶಿಪ್ ವಿತರಣೆ

300x250 AD

ಜೊಯಿಡಾ: ವಿದ್ಯಾರ್ಥಿಗಳು ದೇಶದ ಆಸ್ತಿ, ಇದಕ್ಕಾಗಿ ಇವರ ಶಿಕ್ಷಣ ಮಟ್ಟವನ್ನು ಪ್ರೋತ್ಸಾಹಿಸಬೇಕು. ಪಡೆದ ಶಿಕ್ಷಣ ತಮ್ಮ ಪ್ರದೇಶದ ಅಭಿವೃದ್ಧಿಗೆ ಸದ್ವಿನಿಯೋಗವಾಗಬೇಕು ಎಂದು ವಿಆರ್‌ಡಿಎಮ್ ಟ್ರಸ್ಟ್ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಹೇಳಿದರು.

ಅವರು ತಾಲೂಕಿನ ಪದವಿ ಕಾಲೇಜು ಸಭಾಂಗಣದಲ್ಲಿ ವಿಆರ್‌ಡಿಎಮ್ ಟ್ರಸ್ಟ್ ಹಳಿಯಾಳ, ವಿಶ್ವಕೊಂಕಣಿ ಅಕಾಡಾಮಿ ಮಂಗಳೂರು ಸಹಯೋಗದಲ್ಲಿ ಕುಣಬಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಾರ್ಯಕ್ರಮ ಉದ್ಘಾಟಿಸಿ, 2021- 22ನೇ ಸಾಲಿನಲ್ಲಿ 141 ವಿದ್ಯಾರ್ಥಿಗಳಿಗೆ 2.40 ಲಕ್ಷ ಸ್ಕಾಲರ್‌ಶಿಪ್ ವಿತರಿಸಿ ಮಾತನಾಡುತ್ತಿದ್ದರು.

ಕಳೆದ 8 ವರ್ಷದ ಅವಧಿಯಲ್ಲಿ 691 ವಿದ್ಯಾರ್ಥಿಗಳಿಗೆ 13 ಲಕ್ಷ ಸ್ಕಾಲರ್‌ಶಿಪ್ ವಿತರಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕಾಗಿದೆ. ದೇಶಪಾಂಡೆಯವರು ಶಿಕ್ಷಣ ಪ್ರೋತ್ಸಾಹಿಸುವ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

300x250 AD

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ ಮಾತನಾಡಿ, ಹಿಂದುಳಿದ ನಂಜುಡಪ್ಪಾ ವರದಿಯಲ್ಲಿ ಸೇರಿಸಿದ ತಾಲೂಕಿಗೆ ಆರ್.ವಿ. ದೇಶಪಾಂಡೆಯವರು ಅಭಿವೃದ್ಧಿಯ ರೂಪ ನೀಡಿದ್ದಾರೆ. ಅನೇಕ ದಶಕಗಳಿಂದ ಅವರು ಈ ತಾಲೂಕನ್ನು ದತ್ತು ಪಡೆದು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿಆರ್‌ಡಿಎಮ್ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಶ್ಯಾಮ ಕಾಮತ್, ಪ್ರಮುಖರಾದ ದೇವಿದಾಸ ದೇಸಾಯಿ, ಸುಭಾಷ ಗಾವಡಾ, ಪ್ರಸನ್ನ ಗಾವಡಾ, ಅಜಿತ ಮಿರಾಶಿ, ರವಿ ಮಿರಾಶಿ, ಜಯಾನಂದ ಡೇರೆಕರ, ವಿಷ್ಣು ಡೇರೆಕರ, ಕಾಲೇಜ್ ಪ್ರಾಂಶುಪಾಲರಾದ ಶೈಲಜಾ ಎಚ್.ಡಿ. ಇದ್ದರು. ವಿಆರ್‌ಡಿಎಮ್ ಸೂರ್ಯವಂಶಿ ಸ್ವಾಗತಿಸಿದರು. ನಾರಾಯಣ ವಾಡಕರ ವಂದಿಸಿದರು. ಸಂತೋಷ ಮೋರಿ ಸಹಕರಿಸಿದರು.

Share This
300x250 AD
300x250 AD
300x250 AD
Back to top