Slide
Slide
Slide
previous arrow
next arrow

ವಿದ್ಯಾರ್ಥಿಗಳಲ್ಲಿ ಸಸ್ಯದ ಬಗ್ಗೆ ಅರಿವು ಮೂಡಿಸುವದು ಅವಶ್ಯ: ರವೀಂದ್ರ ಕೇಣಿ

300x250 AD

ಅಂಕೋಲಾ: ಶಾಲೆಯಲ್ಲಿ ಔಷಧಿವನ ಮತ್ತು ತೋಟಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಸ್ಯದ ಬಗ್ಗೆ ಅರಿವು ಮೂಡಿಸುವದು ಅವಶ್ಯವಾಗಿದೆ ಎಂದು ಪಿ.ಎಮ್.ಪ್ರೌಢಶಾಲೆಯ ನಿವೃತ್ತ ಪ್ರಾಚಾರ್ಯ ಹಾಗೂ ದಿನಕರ ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ ಹೇಳಿದರು.

ಅವರು ಪಿ.ಎಂ.ಪ್ರೌಢಶಾಲೆಯ ಪ್ರಕೃತಿ ಇಕೋ ಕ್ಲಬ್ ವತಿಯಿಂದ ಶಾಲೆಯಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವದರ ಮೂಲಕ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ಶಾಲೆಗಳಲ್ಲಿ ಹಣ್ಣು ತರಕಾರಿ ಮತ್ತು ಇತರೆ ಗಿಡಗಳನ್ನು ನೆಟ್ಟು ಪೋಷಿಸುವದರ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಔಷಧೀಯ ಸಸ್ಯಗಳನ್ನು ಬೆಳೆಸಿ ಅವುಗಳ ಬಗ್ಗೆ ಮಾಹಿತಿ ಒದಗಿಸುವದು ತುಂಬ ಪ್ರಯೋಜನಕಾರಿಯಾಗುವದು ಎಂದರು.

ಪ್ರಾರಂಭದಲ್ಲಿ ಇಕೋ ಕ್ಲಬ್ ಸಂಚಾಲಕ ಜಿ.ಎಸ್.ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಪರಿಸರದ ಬಗ್ಗೆ ಮತ್ತು ಸಸ್ಯಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡುವ ದೃಷ್ಟಿಯಿಂದ ಪಿ.ಎಂ.ಪ್ರೌಢಶಾಲೆಯಲ್ಲಿ ಪ್ರಕೃತಿ ಇಕೋ ಕ್ಲಬ್ ವತಿಯಿಂದ ಪ್ರತಿವರ್ಷ ವಿವಿಧ ಜಾತಿಯ ಸಸ್ಯಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಅವುಗಳ ಮಾಹಿತಿ ನೀಡಲಾಗುತ್ತಿದೆ ಮತ್ತು ಪರಿಸರ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

300x250 AD

ಪ್ರಭಾರ ಮುಖ್ಯಾಧ್ಯಾಪಕಿ ಶೀಲಾ ಬಂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಅಶ್ವಿನಿ ಬಿ.ನಾಯ್ಕ ವನಮಹೋತ್ಸವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಹಣ್ಣು ಮತ್ತು ಔಷಧಿ ಸಸ್ಯಗಳನ್ನು ವಿತರಿಸಲಾಯಿತು. ಶಿಕ್ಷಕಿ ರೇಷ್ಮಾ ಮಾನಕಾಮೆ ಮತ್ತು ಶಾರೀರಿಕ ಶಿಕ್ಷಕರಾದ ಪ್ರವೀಣ್ ಆಗೇರ ಸಂಘಟನೆಗೆ ಸಹಕರಿಸಿದರು. ಇಕೋ ಕ್ಲಬ್ ಅಧ್ಯಕ್ಷೆ ಸಮೀಕ್ಷಾ ನಾಯ್ಕ ವಂದಿಸಿದರು. ಶಿಕ್ಷಕ ರಾಘವೇಂದ್ರ ಮಹಾಲೆ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top