• Slide
    Slide
    Slide
    previous arrow
    next arrow
  • ನಿಯಂತ್ರಿತ ಬಳಕೆಯಿಂದ ಸಂಪನ್ಮೂಲ ಉಳಿಸಿ ಮುಂದಿನ ತಲೆಮಾರಿಗೆ ನೀಡಿ: ಕವಿತಾ ಹೆಬ್ಬಾರ್

    300x250 AD

    ಯಲ್ಲಾಪುರ: ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಪಟ್ಟಣದ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವಿಶ್ವಜನಸಂಖ್ಯಾ ದಿನಾಚರಣೆ ಆಯೋಜಿಸಲಾಗಿತ್ತು.

    ಸಂಪನ್ಮೂಲ ವ್ಯಕ್ತಿಯಾದ ಉಪನ್ಯಾಸ ನೀಡಿದ ಕಾಲೇಜಿನ ಉಪನ್ಯಾಸಕಿ ಕವಿತಾ ಹೆಬ್ಬಾರ್, ನಿಸರ್ಗದಲ್ಲಿ ದೊರೆಯುವ ವಿವಿಧ ರೀತಿಯ ಸಂಪನ್ಮೂಲಗಳನ್ನು ಮನುಷ್ಯ ಬರಿದಾಗಿಸುತ್ತಿದ್ದಾನೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂಪನ್ಮೂಲಗಳ ಕೊರತೆಯನ್ನು ಎದುರಿಸಬೇಕಾಗುತ್ತದೆ. ಅನಿಯಂತ್ರಿತ ಬಯಕೆಯಿಂದಾಗಿ ಮಿತಿಮೀರಿ ಸಂಪನ್ಮೂಲಗಳನ್ನು ಬಳಸುತ್ತಾ ಹೋದರೆ ಮುಂದಿನ ತಲೆಮಾರಿನ ಜನರ ಜೀವನ ನಿರ್ವಹಣೆ ಕಷ್ಟ, ಜನಸಂಖ್ಯಾ ಸ್ಫೋಟದಿಂದ ಆಗುವ ದುಷ್ಪರಿಣಾಮಗಳು ಮತ್ತು ಜನಸಂಖ್ಯಾ ನಿಯಂತ್ರಣ ಕ್ರಮಗಳ ವಿವರಿಸಿದರು.

    ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆಯ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾನವ ಸಂಪನ್ಮೂಲದ ಮಹತ್ವವನ್ನು ಹಾಗೂ ಹೆಚ್ಚಾದ ಜನಸಂಖ್ಯೆಯಿಂದಾಗುವ ದುಷ್ಪರಿಣಾಮಗಳನ್ನು ಅರಿಯಬೇಕಿದೆ ಎಂದರು.

    300x250 AD

    ವಿದ್ಯಾರ್ಥಿನಿ ವಿಭಾ ಹೆಬ್ಬಾರ್ ವಿಶ್ವ ಜನಸಂಖ್ಯಾ ದಿನಾಚರಣೆಯ ಕುರಿತು ಮಾತನಾಡಿದರು. ಶಿಕ್ಷಕಿ ಉಷಾ ಭಟ್ ಸ್ವಾಗತಿಸಿ, ನಿರ್ವಹಿಸಿದರು. ಪಲ್ಲವಿ ಕೋಮಾರ ವಂದಿಸಿದರು. ಶಿಕ್ಷಕರಾದ ವನಿತಾ ಭಾಗ್ವತ್, ಪ್ರೇಮಾ ಗಾಂವ್ಕರ್, ರವೀಂದ್ರ ಶರ್ಮಾ, ಸಚಿನ್ ಭಟ್ ಸೇರಿದಂತೆ ಇತರೆ ಶಿಕ್ಷಕರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top