• Slide
    Slide
    Slide
    previous arrow
    next arrow
  • ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರ ಪ್ರತಿಭಟನೆ

    300x250 AD

    ದಾಂಡೇಲಿ: ಸದಾ ಒಂದಲ್ಲಾ ಒಂದು ಸಮಸ್ಯೆ ಹಾಗೂ ಎಡವಟ್ಟುಗಳ ಮೂಲಕ ನಗರದ ಜನತೆಯ ಹಿಡಿಶಾಪಕ್ಕೆ ಕಾರಣವಾದ ಯುಜಿಡಿ ಗುತ್ತಿಗೆ ಸಂಸ್ಥೆಯ ಅಸಮರ್ಪಕ ಕಾಮಗಾರಿಯಿಂದ ನಗರದ ಪಟೇಲ್ ನಗರದಲ್ಲಿ ರಸ್ತೆ ಹದಗೆಟ್ಟು ಸ್ಥಳೀಯ ಜನತೆಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ತೀವ್ರ ತೊಂದರೆಯಾಗಿದ್ದು, ಹದಗೆಟ್ಟಿರುವ ರಸ್ತೆಯನ್ನು ಶೀಘ್ರ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಸಾರ್ವಜನಿಕರು ಬುಧವಾರ ಪ್ರತಿಭಟನೆಯನ್ನು ನಡೆಸಿದ್ದಾರೆ.

    ಯುಜಿಡಿ ಗುತ್ತಿಗೆ ಸಂಸ್ಥೆಯವರು ಯುಜಿಡಿ ಪೈಪ್ಲೈನ್ ಗಾಗಿ ಬೃಹತ್ ಪ್ರಮಾಣದಲ್ಲಿ ರಸ್ತೆ ಅಗೆದು ಪೈಪ್ ಅಳವಡಿಸಿದ ಬಳಿಕ ಮಣ್ಣು ಹಾಕಿ ಮುಚ್ಚಿ ಆನಂತರ ಜಲ್ಲಿ ಕಲ್ಲುಗಳನ್ನು ತಂದು ಹಾಕಿರುತ್ತಾರೆ. ಇದೀಗ ರಸ್ತೆಯ ಅಲ್ಲಲ್ಲಿ ಮಧ್ಯ ಭಾಗದಲ್ಲಿ ಹೊಂಡ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಒಂದು ಕಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಆಟೋ ರಿಕ್ಷಾಗಳು ಸಹ ಬರಲು ಕಷ್ಟಸಾಧ್ಯವಾಗಿದೆ. ಇನ್ನೂ ಅನಾರೋಗ್ಯಗೊಂಡಲ್ಲಿ ಆಸ್ಪತ್ರೆಗೆ ಹೋಗುವುದರೊಳಗೆ ಅರ್ಧಜೀವ ಹೋಗುವ ಪರಿಸ್ಥಿತಿ ಇಲ್ಲಿದೆ.

    300x250 AD

    ಒಂದು ನಿರ್ದಿಷ್ಟ ಸಮಯದಲ್ಲಿ ಇಲ್ಲಿ ಯುಜಿಡಿ ಕಾಮಗಾರಿ ಸಂಸ್ಥೆಯವರು ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದಲ್ಲಿ ಇಂದು ಈ ಪರಿಸ್ಥಿತಿ ಇಲ್ಲಿ ಬರುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಕೂಡಲೆ ಹೊಂಡ ಬಿದ್ದ ರಸ್ತೆಯನ್ನು ದುರಸ್ತಿಗೊಳಿಸಿ, ಕೊನೆಪಕ್ಷ ವಾಹನ ಸಂಚಾರಕ್ಕೆ ಆಗುವಷ್ಟಾದರೂ ದುರಸ್ತಿ ಮಾಡಿಕೊಡಬೇಕೆಂದು ಆಗ್ರಹಿಸಿ ನಗರಸಭಾ ಮಾಜಿ ಸದಸ್ಯ ಮಸ್ತಾನಸಾಬ ಅತ್ತಾರ, ಜಾಫರ್ ಮಸ್ತಾನ ಸಾಬ ಅತ್ತಾರ, ಮದರ್ ಸಾಬ್, ಮುನೀರ್, ನೂರ್ ನಿಸಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top