ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೇವಾಳಿ ಗ್ರಾಮದ ಶ್ರೀನಿವಾಸ ಭಟ್ಟ ಕೊಂಬಾ ಎಂಬುವವರ ತೋಟದಲ್ಲಿ ಭಾರಿ ಗಾತ್ರದ ಮರವೊಂದು ಗಾಳಿ- ಮಳೆಯಿಂದಾಗಿ ಬಿದ್ದ ಪರಿಣಾಮ 30 ಕ್ಕೂ ಹೆಚ್ಚಿನ ಫಲ ಬರುವ ಅಡಿಕೆ ಮರಗಳು ಮುರಿದು ಹಾಳಾಗಿವೆ.
ತಾಲೂಕಿನಾದ್ಯಂತ ಸತತವಾಗಿ ಗಾಳಿ ಮಳೆಯಾಗುತ್ತಿರುವ ಕಾರಣ ಮರಗಳು ಮುರಿದು ಬೀಳುತ್ತಿವೆ. ಗುಡ್ಡಗಳು ಕುಸಿಯುತ್ತಿದ್ದು, ಅಡಿಕೆ, ಭತ್ತ ಬೆಳೆಯುವ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ ಭಟ್ಟ ಕೊಂಬಾ, ಕಳೆದ 25 ವರ್ಷಗಳಿಂದ ಮಕ್ಕಳಂತೆ ಸಾಕಿ ಅಡಿಕೆ ಮರಗಳನ್ನು ಬೆಳೆಸಿದ್ದೆ. ಪಕ್ಕದ ಅರಣ್ಯದಲ್ಲಿದ್ದ ಮರ ಬಿದ್ದು ಅಡಿಕೆ ಮರಗಳು ಮುರಿದು ಲಕ್ಷಾಂತರ ರೂ. ಹಾನಿ ಉಂಟಾಗಿದೆ. ಸರ್ಕಾರದವರು ಪರಿಹಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.