ಕಾರವಾರ: ನೀರಾವರಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಭತ್ತದ ನಾಟಿ ಬೇಡಿಕೆಗೆ ತಕ್ಕಂತೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಸಕಾಲಕ್ಕೆ ನಾಟಿ ವೇಗವಾಗಿ ನಡೆಯಲು ರೈತರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರಂಭಿಸಿದ ಯಂತ್ರಶ್ರೀ ಯಾಂತ್ರಿಕೃತ ಭತ್ತ ನಾಟಿಯತ್ತ ಒಲವು ತೋರುತ್ತಿದ್ದಾರೆ ಎಂದು ಕಾರವಾರ- ಅಂಕೋಲಾ ತಾಲೂಕಿನ ಯೋಜನಾಧಿಕಾರಿ ವಿನಾಯಕ ನಾಯ್ಕ ತಿಳಿಸಿದ್ದಾರೆ.
ಕಡಿಮೆ ಖರ್ಚಿನಲ್ಲಿ ಸಕಾಲಕ್ಕೆ ಭತ್ತದ ನಾಟಿಯಾಗುತ್ತಿದ್ದು, ಸಮಾನ ಸಸಿಗಳ ಅಂತರ, ಸಸಿಗಳ ನಡುವೆ ಗಾಳಿ ಬೆಳಕಿನಿಂದ ಸಮೃದ್ಧ ಬೆಳವಣಿಗೆಗಾಗಿ ಯಾಂತ್ರಿಕೃತ ಭತ್ತದ ನಾಟಿ ಬಹು ಉಪಯೋಗ ಎಂಬುದು ರೈತರ ಆಭಿಪ್ರಾಯ.
1 ಎಕರೆಗೆ 80ರಿಂದ 100ರವರೆಗೆ 1 ಅಡಿ ಅಗಲ, ಎರಡೂವರೆ ಉದ್ದದ ಭತ್ತದ ಸಸಿ ಬೆಳೆಸಬೇಕು. ಸಸಿಗಳ ಬೇರುಗಳಿಗೆ ಬೇರು ಸೇರಿ ಚಾಪೆಯಂತೆ ರೂಪುಗೊಳ್ಳುತ್ತದೆ. ಅವುಗಳನ್ನು 12 ದಿನಗಳ ನಂತರ ಕೃಷಿ ಭೂಪಿ ಸಮತಟ್ಟು ಮಾಡಿ ಯೋಜನೆಯ ಕೃಷಿ ಯಂತ್ರಧಾರೆ ಕಿನ್ನರ ಕೇಂದ್ರದಿಂದ ವಾಕ್‌ಬೆಡ್ ಕೊಬ್ಯಾಟೋ ಮಶೀನ್ ಮೂಲಕ ನಾಟಿ ಮಾಡಲಾಗುತ್ತದೆ.
1 ಎಕರೆ ನಾಟಿಗೆ ವಿಶಾಲವಾದ ಗದ್ದೆಗಳಲ್ಲಿ 2 ಅಥವಾ ಎರಡೂವರೆ ಕಡಿಮೆ ಖರ್ಚಿನಲ್ಲಿ ನಾಟಿ ಮಾಡಲಾಗುತ್ತಿದೆ. ಹಾಗೆ ಈ ವರ್ಷ ಮುಂಗಾರು ಭತ್ತ ಕೃಷಿಗೆ ಕಾರವಾರ ಹಾಗೂ ಅಂಕೋಲಾ ಸೇರಿ 300 ಎಕರೆ ಗುರಿ ಪಡೆದು ಸಕಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಶಿರಸಿ ವಿಭಾಗದ ಯೋಜನಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ಕೃಷ್ಣ, ಸಿಎಚ್‌ಎಸ್‌ಸಿ ವಿಭಾಗದ ಪ್ರಬಂಧಕ ಜಟ್ಟ, ವಲಯ ಮೇಲ್ವಿಚಾರಕ ಸಂತೋಷ ನಾಯ್ಕ ಇದ್ದರು.