Slide
Slide
Slide
previous arrow
next arrow

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಪ್ರಗತಿಗೆ ಸ್ಥಳೀಯರ ಬೆಂಬಲ ಅಗತ್ಯ

300x250 AD

ಕಾರವಾರ: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯ ಪ್ರಗತಿಗೆ ಉತ್ತರಕನ್ನಡ ಜಿಲ್ಲೆಯ ಸ್ಥಳೀಯರು, ಅದರಲ್ಲೂ ಹುಬ್ಬಳ್ಳಿ, ಕಾರವಾರ ಮತ್ತು ಅಂಕೋಲಾ ಜನತೆ ಬೆಂಬಲ ನೀಡಬೇಕು ಎಂದು ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಮನವಿ ಮಾಡಿದೆ.

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯಿಂದ ಪರಿಸರ ಮತ್ತು ವನ್ಯಜೀವಿ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯ ಸಮುದಾಯ ಮತ್ತು ಪಾಲುದಾರರ ಜೊತೆ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ. ಹೀಗಾಗಿ ಪ್ರತಿಯೊಬ್ಬರೂ ಈ ಪ್ರದೇಶದ ಅಭಿವೃದ್ಧಿಯನ್ನು ಒಪ್ಪಿಕೊಳ್ಳುವ ಮತ್ತು ಈ ಯೋಜನೆಯ ಪ್ರಗತಿಗೆ ಇನ್ನು ಮುಂದೆ ಅಡ್ಡಿಯಾಗದಂತೆ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ಬೆಂಬಲಿಸುವುದು ಅಗತ್ಯವಾಗಿದೆ ಎಂದಿದೆ.

ಕಳೆದ ಕೆಲವು ತಿಂಗಳುಗಳಿಂದ ವೃಕ್ಷ ಫೌಂಡೇಷನ್ ಮೂಲಕ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲು ಪ್ರಯತ್ನಿಸಿವೆ. ಈ ಯೋಜನೆ ಬಗ್ಗೆ ವೃಕ್ಷ ಫೌಂಡೇಷನ್ ವಾಸ್ತವವಲ್ಲದ ಮಾಹಿತಿಯನ್ನು ಪ್ರಸರಣ ಮಾಡಿ ಸಾರ್ವಜನಿಕರನ್ನು ದೊಡ್ಡ ಪ್ರಮಾಣದಲ್ಲಿ ಹಾದಿ ತಪ್ಪಿಸುತ್ತಿದೆ. ವೃಕ್ಷ ಫೌಂಡೇಷನ್ ತನ್ನ ಪಿಐಎಲ್‌ನಲ್ಲಿ ಈ ಯೋಜನೆಯ ಮಾರ್ಗ ಕಾಳಿ ಹುಲಿ ಮೀಸಲು ಪ್ರದೇಶದ ಹತ್ತು ಕಿ.ಮೀ. ಇಎಸ್‌ಝೆಡ್‌ನಲ್ಲಿ ಸಾಗುತ್ತದೆ ಎಂದು ವಾಸ್ತವಾಂಶಗಳನ್ನು ತಪ್ಪಾಗಿ ನಿರೂಪಿಸಿದೆ. ಆದಾಗ್ಯೂ ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ ಮತ್ತು ಇಎಸ್‌ಝೆಡ್ ಅಧಿಕೃತ ಕರಡು ಅಧಿಸೂಚನೆಯಲ್ಲಿ ಪ್ರಕಟವಾಗಿರುವಂತೆ ಇಎಸ್‌ಝೆಡ್ ಗಡಿ 7 ಕಿ.ಮೀ. ಎಂದು ನಿಗದಿಪಡಿಸಿದೆ. ಟಿ.ಎನ್.ಗೋದಾವರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ 10 ಕಿ.ಮೀ. ಇಎಸ್‌ಝೆಡ್ ಪರಿಕಲ್ಪನೆ ಮೂರು ಸಂರಕ್ಷಿತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆ ಮತ್ತು ಸೂಕ್ಷ್ಮ ಪರಿಸರ ವಲಯದಗಡಿ ನಡುವಿನ ವೈಮಾನಿಕ ಅಂತರ 14 ಕಿ.ಮೀ.ಗಳಾಗಿವೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ದಾಂಡೇಲಿಯ ಕಾಳಿ ಹುಲಿ ಮೀಸಲು ವಲಯದ ನಿರ್ದೇಶಕರು ಆರ್‌ಟಿಐಗೆ ನೀಡಿರುವ ಉತ್ತರದಲ್ಲೂ ಈ ಅಂಶವನ್ನು ಪುನರುಚ್ಚರಿಸಿದ್ದಾರೆ. ದುರದೃಷ್ಟಕರವೆಂದರೆ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಈ ಯೋಜನೆಯ ಪ್ರಗತಿಯನ್ನು ದುರ್ಬಲಗೊಳಿಸಲು ಮತ್ತು ಈ ಪ್ರದೇಶದ ಆರ್ಥಿಕ ಪ್ರಗತಿಗೆ ಅಡ್ಡಿಯಾಗಲು ನಿಖರವಲ್ಲದ ಮಾಹಿತಿಯನ್ನು ಬಳಸಿದೆ ಎಂದು ಹೇಳಿದೆ.

300x250 AD

ಈ ಯೋಜನೆಯು ಸಾಗರಮಾಲಾ ಯೋಜನೆಯ ಯಶಸ್ಸಿಗೆ ಪ್ರಮುಖ ಸಂಪರ್ಕವಾಗಿದೆ ಎಂದು ರೈಲ್ವೆ ಸೇವಾ ಸಮಿತಿ ನಂಬಿದೆ. ಕರಾವಳಿ ಮತ್ತು ಅರಬ್ಬಿ ಸಮುದ್ರದಲ್ಲಿ ಆಯಾಕಟ್ಟಿನ ಸ್ಥಳಗಳನ್ನು ಬಳಸಿಕೊಳ್ಳಲು ಬಂದರು ಸಚಿವಾಲಯದ 7500 ಕಿ.ಮೀ. ಉದ್ದದ ಪ್ರಮುಖ ಯೋಜನೆಯಾಗಿದೆ. ಸಾಗಣೆ ವ್ಯವಸ್ಥೆಯಲ್ಲಿ ಉತ್ತಮ ಸ್ಪರ್ಧಾತ್ಮಕತೆಗೆ ಒತ್ತು ನೀಡಿ ಮೂಲ ಸೌಕರ್ಯ ಸುಧಾರಣೆಗೆ ಇದು ನೆರವಾಗಲಿದ್ದು, ಇದರಿಂದ ಕೈಗಾರಿಕೆ ವಲಯ ಬೆಳವಣಿಗೆಯಾಗಲಿದೆ. ಉದ್ಯೋಗ ಸೃಜನೆ ಮತ್ತು ಭಾರತದ ಕರಾವಳಿ ಭಾಗದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಹೀಗಾಗಿ ಈ ವಲಯದ ಗಂಭೀರ ಆರ್ಥಿಕ ಬೆಳವಣಿಗೆಗಾಗಿ ನಾವು ಈ ಯೋಜನೆಗೆ ಬೆಂಬಲ ನೀಡುತ್ತೇವೆ ಮತ್ತು ಯಾವುದೇ ವಿಳಂಬವಿಲ್ಲದೇ ಈ ಯೋಜನೆ ಕಾರ್ಯಗತವಾಗಬೇಕೆಂದು ಬಯಸುತ್ತೇವೆ.


Share This
300x250 AD
300x250 AD
300x250 AD
Back to top