• Slide
    Slide
    Slide
    previous arrow
    next arrow
  • ಬಸ್ ಓಡಾಟಕ್ಕೆ ಅಡಚಣೆ;ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ

    300x250 AD

    ಯಲ್ಲಾಪುರ:ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಈರಾಪುರದಲ್ಲಿ ಬಸ್ ಓಡಾಟಕ್ಕೆ ಅಗತ್ಯವಾಗಿರುವ ಕಡೆಗಳಲ್ಲಿ ಗ್ರಾಮಸ್ಥರೇ ರಸ್ತೆ ದುರಸ್ತಿ ಮಾಡಿದ್ದಾರೆ.

    ಈ ಹಿಂದೆ ಬಸ್ ಓಡಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಹೆಬ್ಬಾರಕುಂಬ್ರಿಯಿಂದ ಈರಾಪುರಕ್ಕೆ ಸಿಸಿ ರಸ್ತೆ ಇದ್ದರೂ, ಕೆಲವೆಡೆ ಬಸ್ ಓಡಾಟಕ್ಕೆ ಸಮಸ್ಯೆಯಾಗುತ್ತದೆ ಎಂದು ಬಸ್ ಚಾಲಕರು ತಕರಾರು ಮಾಡುತ್ತಿದ್ದರು. ಅದರ ನಂತರ ಈರಾಪುರಕ್ಕೆ ಬಸ್ ಓಡಾಟ ಬಂದ್ ಮಾಡಲಾಗಿತ್ತು. ಇದೀಗ ಪುನಃ ಆರಂಭಿಸುವಂತೆ ಆ ಭಾಗದ ಮಹಿಳೆಯರು ಬಸ್ ಘಟಕದಲ್ಲಿ ಮನವಿ ಸಲ್ಲಿಸಿದ್ದರು. ಬಸ್ ಓಡಾಟ ಆರಂಭವಾದ ನಂತರ ಮತ್ತೆ ಬಸ್ ಚಾಲಕರು ರಸ್ತೆ ವಿಚಾರದಲ್ಲಿ ತಕರಾರು ಮಾಡಬಾರದೆಂಬ ಹಿನ್ನೆಲೆಯಲ್ಲಿ ಮಹಿಳೆಯರು, ಗ್ರಾಮಸ್ಥರು ಸೇರಿ ರಸ್ತೆ ದುರಸ್ತಿ ಮಾಡಿದ್ದಾರೆ.

    300x250 AD

     ಗ್ರಾ.ಪಂ ಸದಸ್ಯ ತಿಮ್ಮಣ್ಣ ಗಾಂವ್ಕಾರ ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ರಸ್ತೆಗೆ ಕಡಿ ವ್ಯವಸ್ಥೆ ಕಲ್ಪಿಸಿದ್ದು, ಗ್ರಾಮಸ್ಥರು ಶ್ರಮದಾನದ ಮೂಲಕ ಈರಾಪುರ ಶಾಲೆ, ತ್ರಯಂಬಕೇಶ್ವರ ದೇವಸ್ಥಾನದ ಬಳಿ ಕಡಿ, ಮಣ್ಣು ಹಾಕಿ ರಸ್ತೆ ಸರಿಪಡಿಸಿದರು. ಇನ್ನಾದರೂ ಯಾವುದೇ ನೆಪ ಹೇಳದೇ ಈರಾಪುರಕ್ಕೆ ಬಸ್ ಓಡಾಟ ಆರಂಭಿಸಬೇಕು. ಇಲ್ಲವಾದಲ್ಲಿ ಹೆಬ್ಬಾರಕುಂಬ್ರಿ ಬಳಿ ಕಳಚೆ ಬಸ್ ತಡೆದು ಪ್ರತಿಭಟನೆ ನಡೆಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top