Slide
Slide
Slide
previous arrow
next arrow

ಮಾರುತಿ ಗುರೂಜಿಯವರ ಚಾತುರ್ಮಾಸ ವ್ರತ ಆರಂಭ

300x250 AD

ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿ ದೇವಸ್ಥಾನದ ಧರ್ಮಾಧಿಕಾರಿ ಮಾರುತಿ ಗುರೂಜಿಯವರ ಚಾತುರ್ಮಾಸ ವ್ರತವು ಆಷಾಢ ಶುದ್ಧ ಹುಣ್ಣಿಮೆ ಬುಧವಾರದಂದು ವ್ಯಾಸಪೂಜೆ ಹಾಗೂ ಇನ್ನಿತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು.

ಲೋಕಕಲ್ಯಾಣಾರ್ಥದ ಮಹಾನ್ ಸಂಕಲ್ಪದೊಂದಿಗೆ ಶ್ರೀದೇವರಲ್ಲಿ ಪ್ರಾರ್ಥಿಸಿ ವ್ರತ ಆರಂಭಿಸಿದರು. ಇಂತಹ ಪುಣ್ಯ ಪರ್ವದ ಶುಭಾವಸರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಆಗಮಿಸಿ ಗುರೂಜಿಯವರ ದಿವ್ಯಾನುಗ್ರಹಕ್ಕೆ ಪಾತ್ರರಾದರು. ಅಂತೆಯೇ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಆಗಮಿಸಿ ಶ್ರೀದೇವರ ದರ್ಶನ ಹಾಗೂ ಗುರುಗಳ ಆಶೀರ್ವಾದ ಪಡೆದರು. ಅಪಾರ ಭಕ್ತ ಗಣ ಸಮೂಹ ನೆರೆದಿದ್ದು, ಪೂಜ್ಯರ ಅನುಗ್ರಹ ಸಂದೇಶವನ್ನು ಪಡೆದು ಕೃತಾರ್ಥತೆಯನ್ನು ಪಡೆದರು.

300x250 AD

Share This
300x250 AD
300x250 AD
300x250 AD
Back to top