Slide
Slide
Slide
previous arrow
next arrow

ಜೇನುಕಲ್ಲುಗುಡ್ಡ,ಮಾಗೋಡ ಜಲಪಾತಗಳಲ್ಲಿ ಕಾವಲು ಸಿಬ್ಬಂದಿ ನೇಮಕಕ್ಕೆ ಆದೇಶ

300x250 AD

ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಜೇನುಕಲ್ಲುಗುಡ್ಡ ಹಾಗೂ ಮಾಗೋಡ ಜಲಪಾತಗಳಲ್ಲಿ ಕಾವಲು ಸಿಬ್ಬಂದಿ ನೇಮಕ ಮಾಡುವಂತೆ ತಾ.ಪಂ ಇಒ ಜಗದೀಶ ಕಮ್ಮಾರ ನಂದೊಳ್ಳಿ ಗ್ರಾಮ ಪಂಚಾಯಿತಿಗೆ ಆದೇಶಿಸಿದ್ದಾರೆ.

ಮಳೆಗಾಲದಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಅವರ ಹಿತದೃಷ್ಟಿಯಿಂದ ಕಾವಲು ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಅವರಿಗೆ ಸಂಬಂಧಿಸಿದವರು ಸಮವಸ್ತ್ರ ನೀಡಬೇಕು. ತಕ್ಷಣ ಈ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ. 

300x250 AD

ಸಿಬ್ಬಂದಿ ನೇಮಕ: ಈಗಾಗಲೇ ಎರಡೂ ಪ್ರವಾಸಿ ತಾಣಗಳಲ್ಲಿ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮಾಗೋಡ ಜಲಪಾತದಲ್ಲಿ ಮಾತ್ರ ಸಿಬ್ಬಂದಿ ಇದ್ದರು. ಇತ್ತೀಚೆಗಷ್ಟೇ ಜೇನುಕಲ್ಲುಗುಡ್ಡದಲ್ಲಿಯೂ ಸಿಬ್ಬಂದಿ ನೇಮಿಸಲಾಗಿದೆ ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ಟ ಕಿರಕುಂಭತ್ತಿ ಮಾಹಿತಿ ನೀಡಿದ್ದಾರೆ.

Share This
300x250 AD
300x250 AD
300x250 AD
Back to top