ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ತಾಲೂಕಿನ ಗೋಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಾರಾಯಣ ಎಸ್ ಹೆಗಡೆ, ಬಿದ್ರಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಶ್ಯಾಮಲಾ ಆರ್ ನಾಯ್ಕ, ಹಾಗೂ ಬೆಂಗಳೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಮಲಾ ಎಂ ನಾಯ್ಕ ಇವರುಗಳ ಜಾನುವಾರು ಮರಣ ಹೊಂದಿದ ಕಾರಣ ಜಾನುವಾರು ವಿಮಾ ಯೋಜನೆಯಡಿ ತಲಾ ರೂ.40,000/-, 35,000/-, 35,000/- ಮೊತ್ತದ ಚೆಕ್ ಗಳನ್ನು ಮತ್ತು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದಿಂದ ತಾಲೂಕಿನ ಹುಣಸೇಕೊಪ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರುಗಳಾದ ವೆಂಕಟರಮಣ ಮಾಬ್ಲೇಶ್ವರ ಹೆಗಡೆ, ಕೆರಿಯಾ ಶಿವು ಗೌಡ, ತಟ್ಟೀಸರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರಾದ ಗಣಪತಿ ಜಿ ಹೆಗಡೆ ಇವರುಗಳು ಮರಣ ಹೊಂದಿದ ಕಾರಣ ಮರಣ ಹೊಂದಿದ ಕಲ್ಯಾಣ ಸಂಘದ ಸದಸ್ಯರ ವಾರಸುದಾರರಿಗೆ ತಲಾ ರೂ. 10,000/-, ಮೊತ್ತದ ಚೆಕ್ ಗಳನ್ನು, ಹಾಗೂ ಕಡಬಾಳ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅನ್ನಪೂರ್ಣ ಗಂಗಾಧರ ಹೆಗಡೆ ಇವರು ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ತಲಾ ರೂ. 10,000/-, ಮೊತ್ತದ ಚೆಕ್ ನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಕ್ಕೂಟದ ವತಿಯಿಂದ ಈಗಾಗಲೇ ಶೇ. 50 ರಷ್ಟು ಅನುದಾನದ ಅಡಿಯಲ್ಲಿ ಹಾಲು ಉತ್ಪಾದಕರಿಗೆ ರಬ್ಬರ್ ಮ್ಯಾಟ್ ಗಳನ್ನು ಹಾಲು ಸಂಘಗಳಿಗೆ ನೇರವಾಗಿ ವಿತರಿಸಲಾಗುತ್ತಿದ್ದು ಮುಂದಿನ ಕಲ್ಯಾಣ ಸಂಘದ ವತಿಯಿಂದ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿನ ಕಲ್ಯಾಣ ಸಂಘದ ಸದಸ್ಯತ್ವ ಹೊಂದಿದ ಹಾಲು ಉತ್ಪಾದಕರುಗಳಿಗೆ ಹುಲ್ಲು ಕತ್ತರಿಸುವ ಯಂತ್ರಗಳನ್ನು ಸಹ ನೀಡಲಾಗುವುದು ಎಂದರು. ಜಾನು ವಿಮೆಯಡಿ ಚೆಕ್ ಪಡೆದು ಮತ್ತೊಂದು ಹಸು ಕಟ್ಟಿ ಹೆಚ್ಚಿನ ಹಾಲು ಉತ್ಪಾದನೆ ಮಾಡುವಂತೆ ಜಾನು ವಿಮೆಯ ಫಲಾನುಭವಿಗಳಿಗೆ ಕರೆ ನೀಡಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಹೈನೋದ್ಯಮದಲ್ಲಿ ಉತ್ತಮ ಅವಕಾಶಗಳು ಬರಲಿದ್ದು, ಅದಕ್ಕಾಗಿ ಜಿಲ್ಲೆಯ ಜನರು ಹೈನೋದ್ಯಮದಿಂದ ವಿಮುಖರಾಗದಂತೆ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರ ಕನ್ನಡ ಜಿಲ್ಲೆಯ ಶೇಖರಣೆ ಮತ್ತು ತಾಂತ್ರಿಕ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ವಿಸ್ತರಣಾಧಿಕಾರಿಗಳಾದ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ್ ಭಟ್, ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಹಾಲು ಉತ್ಪಾದಕರು ಉಪಸ್ಥಿತರಿದ್ದರು.