ಮುಂಡಗೋಡ: ನಮ್ಮ ಜಿಲ್ಲೆಯಲ್ಲಿ ಸದ್ಯ ಹೈನುಗಾರಿಕೆಯಿಂದ 55 ಸಾವಿರ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಅದನ್ನು ಒಂದು ಲಕ್ಷ ಲೀಟರ್ ಉತ್ಪಾದನೆ ಮಾಡುವ ಸಿದ್ಧತೆಯಲ್ಲಿದ್ದೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಇಂದೂರ ಗ್ರಾಮದಲ್ಲಿ ಪಶು ಚಿಕಿತ್ಸಾ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿ, ನಾವು ಮೊದಲು ಹಾಲು ಶಿಥಲೀಕರಣಕ್ಕೆ ಹಾಗೂ ಹಾಲನ್ನು ಪ್ಯಾಕೆಟ್‌ನಲ್ಲಿ ಪಡೆಯುವುದಕ್ಕೆ ಧಾರವಾಡಕ್ಕೆ ಕಳಿಸುತ್ತಿದ್ದೆವು. ಆದರೆ ಈಗ ನಾವು ಶಿರಸಿಯಲ್ಲಿಯೇ ತುಪ್ಪ, ಬೆಣ್ಣೆ, ಹಾಲು ಪ್ಯಾಕೆಟ್ ಮಾಡಿ ಕಳುಹಿಸುತ್ತಿದ್ದೇವೆ ಎಂದರು.
ಶಾಲಾ ಕಟ್ಟಡ ಉದ್ಘಾಟನೆ: ಇಂದೂರು ಪಂಚಾಯತಿ ವ್ಯಾಪ್ತಿಯ ಇಂದಿರಾ ನಗರದಲ್ಲಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್, ಮಕ್ಕಳಿಗೆ ವಿದ್ಯಾವಂತರನ್ನಾಗಿ ಮಾಡಿದರೆ ನಿರುದ್ಯೋಗ ಹೊರಟು ಹೋಗುತ್ತದೆ ಎಂದು ಹೇಳಿದರು.
ಬಹಳ ವರ್ಷದಿಂದ ಈ ಶಾಲೆಗೆ ಬೇಡಿಕೆ ಇದ್ದು, ಇಲ್ಲಿ ಪ್ರತಿಶತ 90 ವಿದ್ಯಾರ್ಥಿಗಳು ಪರಿಶಿಷ್ಟ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಮಕ್ಕಳನ್ನು ಅಜೀರ್ಣಾವ್ಯವಸ್ಥೆಯಲ್ಲಿರುವ ಶಾಲೆಗಳಲ್ಲಿ ಮಕ್ಕಳನ್ನು ಕೂರಿಸಬಾರದು. ಈ ಬಗ್ಗೆ ಎಸ್‌ಡಿಎಂಸಿ ಹಾಗೂ ಪಿಡಿಒ ನಿಗಾ ವಹಿಸಬೇಕು. ಮಕ್ಕಳಿಗೆ ತೊಂದರೆಯಾದರೆ ನಾವು ತಪ್ಪಿಸ್ಥರಾಗುತ್ತವೆ. ಮಕ್ಕಳಿಗೆ ಬೇಕಾದಂತ ಮೂಲಭೂತ ಸೌಕರ್ಯಗಳು ಪುರೈಸುವುದು ನಮ್ಮದೊಂದು ದೊಡ್ಡ ಸವಾಲಾಗಿದೆ. ಆದ್ದರಿಂದ ಸರಕಾರದ ಜೊತೆ ಸಮಾಜ ಕೈ ಜೋಡಿಸಿದರೆ ಅನುಕೂಲವಾಗುತ್ತದೆ ಎಂದರು.