ಯಲ್ಲಾಪುರ:ತಾಲೂಕಿನ ಹಿತ್ಲಳ್ಳಿಯ ಜ್ಯೋತಿಷ್ಯಾಚಾರ್ಯ ವಿದ್ವಾನ್ ನಾಗೇಂದ್ರ ಭಟ್ಟ ಅವರಿಗೆ ಫ್ಲೋರಿಡಾದ ಶ್ರೀವಿದ್ಯಾ ವೈದಿಕ ವಿಜ್ಞಾನ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಿದೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಮುಖರು ಹಿತ್ಲಳ್ಳಿಗೆ ಭೇಟಿ ನೀಡಿ ನಾಗೇಂದ್ರ ಭಟ್ಟ ಅವರನ್ನು ಗೌರವಿಸಿದರು.
ಭಟ್ಟರನ್ನು ಗೌರವಿಸಿದ ಮಹಾಸಭಾದ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ನಾಗೇಂದ್ರ ಭಟ್ಟ ಅವರ ವಿದ್ವತ್ತು, ಸಾಧನೆಗೆ ಗೌರವ ಡಾಕ್ಟರೇಟ್ ಸಂದಿರುವುದು ಸಂತಸದ ಸಂಗತಿ. ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ವಿಶ್ವವಿದ್ಯಾಲಯದ ಗೌರವವನ್ನು ಹೆಚ್ಚಿಸಿದೆ ಎಂದರು.
ಮಹಾಸಭಾದ ಕೇಂದ್ರ ಸಮಿತಿಯ ನಿರ್ದೇಶಕರಾದ ಶ್ರೀಪಾದ ರಾಯ್ಸದ್, ಕೆ.ಎಸ್.ಭಟ್ಟ ಆನಗೋಡ, ಪ್ರಸಾದ ಹೆಗಡೆ, ನಾರಾಯಣ ಹೆಗಡೆ ಕರಿಕಲ್ಲು, ಎಚ್.ಆರ್.ಹೊನ್ನಾವರ ಇತರರಿದ್ದರು.