Slide
Slide
Slide
previous arrow
next arrow

ಗಾಳಿ-ಮಳೆ ಪರಿಣಾಮ: ಹಲವೆಡೆ ಭಾರೀ ಹಾನಿ

300x250 AD

ಯಲ್ಲಾಪುರ: ತಾಲೂಕಿನಲ್ಲಿ ಗಾಳಿ-ಮಳೆ ಮುಂದುವರೆದಿದ್ದು ಜೋರಾದ ಗಾಳಿಯ ಪರಿಣಾಮ ಹಲಸಖಂಡ ಶಾಲೆಯ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದಿದೆ. ಎಪಿಎಂಸಿ-ಗುಂಡ್ಕಲ್ ರಸ್ತೆಯಿಂದ ಹಲಸಖಂಡ ಶಾಲೆಗೆ ಹೋಗುವ ರಸ್ತೆ ಕವಲೊಡೆದಲ್ಲಿ ಮರ ಬಿದ್ದಿದೆ. ಇಡೀ ರಸ್ತೆಗೆ ಮರ ಆವರಿಸಿರುವುದರಿಂದ ಓಡಾಟಕ್ಕೆ ತೊಂದರೆ ಉಂಟಾಗಿದೆ. ಮರ ಬಿದ್ದು ಎರಡು ದಿನಗಳು ಕಳೆದರೂ ಅದರ ತೆರವಿಗೆ ಯಾವ ಕ್ರಮವೂ ಆಗಿಲ್ಲ.
ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಲಿಂಗದಬೈಲಿನಲ್ಲಿ ಶ್ಯಾಮಲಾ ಬಾಬು ಮರಾಠಿ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಹಾಸಣಗಿ ಗ್ರಾ.ಪಂ ವ್ಯಾಪ್ತಿಯ ಮಾದನಸರದಲ್ಲಿ ದೊಂಡಿಬಾಯಿ ಜಾನು ಪಾಟೀಲ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.
ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದ ಕೋಲಿಬೇಣದಲ್ಲಿ ಸರಸ್ವತಿ ದೇಶಭಂಡಾರಿ ಅವರ ಮನೆ ಬಿದ್ದು ಹಾನಿಯಾಗಿದೆ. ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ಬಾಸಲದಲ್ಲಿ ವಾಸುದೇವ ಶಂಕರ ಭಾಗ್ವತ ಅವರ ಮನೆಯ ಗೋಡೆ ಕುಸಿದಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top