ಯಲ್ಲಾಪುರ: ಆಧುನಿಕತೆ ಹೆಸರಿನಲ್ಲಿ ನಮ್ಮ ಮೂಲ ಸಂಸ್ಕೃತಿ ಶಾಸ್ತ್ರ ಪುರಾಣ ಪುಣ್ಯಕಥೆಗಳನ್ನು ಮರೆತಿದ್ದೇವೆ ಇದರಿಂದ ನಮ್ಮ ಮಕ್ಕಳು ನಮ್ಮತನ ಕಳೆದುಕೊಂಡು ಸಂಸ್ಕಾರದಿಂದ ದೂರವಾಗುತ್ತಾರೆ ಎಂದು ಆನಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್ ಕೆ ಭಟ್ಟ ಅಗ್ಗಾಸಿ ಕುಂಬ್ರಿ ಹೇಳಿದರು.
ಅವರು, ಷಡ್ಜ ಕಲಾಕೇಂದ್ರ ಬೆಂಗಳೂರು ಹಾಗೂ ಸುದರ್ಶನ ಸೇವಾ ಪ್ರತಿಷ್ಠಾನ ಆನಗೋಡ ಇವುಗಳ ಸಹಯೋಗದಲ್ಲಿ ಅಚ್ಚುತದಾಸ್ ಮತ್ತು ಕೇಶವದಾಸ ಸಂಸ್ಕರಣೆ ಪ್ರಯುಕ್ತ ಪರಮಾರ್ಥ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಏಕಾದಶಿ ಆಚರಣೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಯುವಕರಲ್ಲಿ ಇಂದು ನಮ್ಮ ಆಚರಣೆಗಳ ಮಹತ್ವ ತಿಳಿದಿಲ್ಲ. ಕಾರಣ ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಸಂದೇಶ ಸಾರುವ ಅವಶ್ಯಕತೆ ಇದೆ ಎಂದು ಹೇಳಿದರು.
ಸುದರ್ಶನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ಮಾತನಾಡಿ, ಪ್ರತಿಷ್ಠಾನ ನಡೆದುಬಂದ ದಾರಿಯನ್ನು ತಿಳಿಸಿ, ಸಾರ್ವಜನಿಕರಿಗೆ ಅನುಕೂಲವಾದ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ ಎಂದರು. ವಿದ್ವಾನ್ ಅನಂತಮೂರ್ತಿ ಯಲುಗಾರ ಲಲಿತಾ ಸಹಸ್ರನಾಮ ಪಾರಾಯಣದ ಮಹತ್ವದ ಕುರಿತು ಮಾಹಿತಿ ನೀಡಿದರು.ಬಿಂದು ಚಕ್ರ ಸ್ವರೂಪಿಯಾದ ಶಕ್ತಿಯನ್ನೇ ತಾಯಿಯಾಗಿ ಲಕ್ಷ್ಮಿಯಾಗಿ ಸರಸ್ವತಿಯಾಗಿ ದೇವಿಯಾಗಿ ಕಾಣುತ್ತೇವೆ. ಕಲಿಯುಗದಲ್ಲಿ ದೇವಿ ಮತ್ತು ಗಣಪತಿ ಆರಾಧನೆಗೆ ಮಹತ್ವವಿದೆ ಯಾವ ಸ್ಥಳದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ನಡೆಯುತ್ತದೆಯೋ ಅಲ್ಲಿ ಮಹಾಶಕ್ತಿ ನೆಲೆಸುತ್ತಾಳೆ ಆದ್ದರಿಂದ ಮನೆ ಮನೆಯಲ್ಲಿ ಪಾರಾಯಣ ಮಾಡಿ ಎಂದರು. ವೇದಿಕೆಯಲ್ಲಿ ಈಶ್ವರದಾಸ ಕೊಪ್ಪೆಸರ, ವೆಂಕಟ್ರಮಣ ಮುದ್ದೆಪಾಲ, ಗಣಪತಿ ಕೊಂಬೆ ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಗಾಂವ್ಕರ್ ಸ್ವಾಗತಿಸಿದರು. ನರಸಿಂಹ ಗಾಂವ್ಕರ್ ವಂದಿಸಿದರು.ಗಣೇಶ ಎಂ ಹೆಗಡೆ ನಿರ್ವಹಿಸಿದರು.