Slide
Slide
Slide
previous arrow
next arrow

ಯಶಸ್ವಿಯಾಗಿ ನಡೆದ ಮಹಿಳಾ ಮೋರ್ಚಾ ಪ್ರಶಿಕ್ಷಣ ವರ್ಗ

300x250 AD

ಕಾರವಾರ: ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಮೋರ್ಚಾ ಪ್ರಶಿಕ್ಷಣ ವರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಹಾಗೂ ಶಾಸಕಿ ರೂಪಾಲಿ ನಾಯ್ಕ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿದರು.

ಪಟ್ಟಣದ ಹೊಟೇಲ್ ಪ್ರೀಮಿಯರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ತತ್ವ, ಸಿದ್ಧಾಂತ, ಕಾರ್ಯಕರ್ತರು, ಸಂಘಟನೆ ಕುರಿತು ವಿವರಿಸಲಾಯಿತು. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಜೀವನದಲ್ಲಿ ನಿತ್ಯವೂ ಹೊಸ ಹೊಸದನ್ನು ನಾವು ಕಲಿಯುತ್ತೇವೆ. ಬಿಜೆಪಿಯಲ್ಲಿ ನಾವು ಜಾಗರೂಕತೆ ಹಾಗೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಪ್ರಶಿಕ್ಷಣದಿಂದ ಇದನ್ನು ಕಲಿಯಬಹುದಾಗಿದೆ. ಪಕ್ಷವು ತನ್ನದೇ ಆದ ತತ್ವ ಸಿದ್ಧಾಂತವನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಜೀ ಅವರು ಹಲವಾರು ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದನ್ನು ನಾವು ಜನರಲ್ಲಿಗೆ ನಿರಂತರವಾಗಿ ತಲುಪಿಸಬೇಕು, ಆರಂಭದಿಂದಲೂ ಇಲ್ಲಿಯವರೆಗೆ ಪಕ್ಷ ಸಂಘಟನೆಯನ್ನು ಅನೇಕ ಮಹನಿಯರು ಮಾಡಿದ್ದಾರೆ ಅದರೊಟ್ಟಿಗೆ ಪಕ್ಷ ಇಷ್ಟು ಎತ್ತರಕ್ಕೆ ಹಾಗೂ ದೊಡ್ಡದಾಗಿ ಬೆಳೆಯಲು ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ ಇದೆ. ಅನೇಕರ ಬಲಿದಾನವೂ ಕೂಡ ಪಕ್ಷ ಬೆಳೆಯುವುದಕ್ಕೆ ಕಾರಣವಾಗಿದೆ. ಪ್ರಶಿಕ್ಷಣದಲ್ಲಿ ನೀಡಲಾಗುವ ಮಾಹಿತಿಯನ್ನು ಪ್ರತಿ ವಿಷಯವನ್ನು ಬರೆದಿಟ್ಟುಕೊಳ್ಳಬೇಕು. ಅದನ್ನು ಆಗಾಗ ಮನನ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಶಿಸ್ತನ್ನು ಪಾಲಿಸಿ ಪ್ರಶಿಕ್ಷಣವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕಿ ರೂಪಾಲಿ ಕರೆನೀಡಿದರು.

300x250 AD

ಈ ಸಂದರ್ಭದಲ್ಲಿ ಬಿಜೆಪಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಕಾರವಾರ ನಗರ ಮಂಡಲದ ಅಧ್ಯಕ್ಷ ನಾಗೇಶ್ ಕುರ್ಡೇಕರ್, ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್, ಅಂಕೋಲಾ ಮಂಡಲ ಅಧ್ಯಕ್ಷರು, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷರು, ಮಹಿಳಾ ಮೋರ್ಚಾ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರು, ಪ್ರಭಾರಿಗಳು, ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top