ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈರಾಪುರಕ್ಕೆ ಬಸ್ ಸೇವೆ ಆರಂಭಿಸುವಂತೆ ಒತ್ತಾಯಿಸಿದ ಮಹಿಳೆಯರು ಮನವಿ ಸಲ್ಲಿಸಿದರು. ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೊಕ್ಕೆ ತೆರಳಿದ ಈರಾಪುರ ಸ್ತ್ರೀ ಶಕ್ತಿ ಸಂಘದ ಸದಸ್ಯರು ನಿರೀಕ್ಷಕರಾದ ಎಸ್. ವಾಯ್ ಚಲವಾದಿ ಅವರಿಗೆ ಮನವಿ ಸಲ್ಲಿಸಿದರು. ಈ ಮೊದಲು ಬರುತ್ತಿದ್ದ ಬಸ್ ಸಂಚಾರವನ್ನು ಕರೋನಾ ನೆಪ ಹೇಳಿ ನಿಲ್ಲಿಸಲಾಗಿದೆ. ಒತ್ತಾಯದ ಮೇರೆಗೆ ಕೆಲವು ದಿನ ಬಿಡಲಾಯಿತು.ನಂತರ ಮಳೆಗಾಲದಲ್ಲಿ ರಸ್ತೆ ಸರಿ ಇಲ್ಲ ಎಂದು ಮತ್ತೆ ಸ್ಥಗಿತಗೊಳಿಸಲಾಯಿತು. ಈಗ ಗ್ರಾಮಕ್ಕೆ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ ಆದರೂ ವಜ್ರಳ್ಳಿವರೆಗೆ ಮಾತ್ರ ಬಸ್ ಬರುತ್ತಿದ್ದು, ಅಲ್ಲಿಂದ ಈರಾಪುರಕ್ಕೆ ಬಸ್ ಬಿಡುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ,ಶಾಲಾ ಮಕ್ಕಳಿಗೆ ಸಮಸ್ಯೆ ಆಗಿದೆ ಎಂದು ದೂರಿದರು. ಒಳಭಾಗದ ಹಳ್ಳಿಗಳ ವಿದ್ಯಾರ್ಥಿಗಳು 35 ಕಿ.ಮಿ ಬರುವುದು ಕಷ್ಟ. ಕಾರಣ ಈ ಮೊದಲಿನಂತೆ ರಾತ್ರಿ ಹಾಲ್ಟಿಂಗ್ ಮತ್ತು ಬೆಳಗಿನ ಬಸ್ ಬಿಡಬೇಕು. ಒಂದು ವೇಳೆ ಬಸ್ ಬಿಡದಿದ್ದರೆ ಧರಣಿ ಮಾಡುವದಾಗಿ ಮಹಿಳೆಯರು ಎಚ್ಚರಿಸಿದರು. ಈವೇಳೆ ಸುಮಿತ್ರಾ ಗಾಂವರ, ಅಂಜಲಿ ಅಣ್ಣಪ್ಪ ದೇವಳಿ ಅಮೃತಾ ಭಟ್ಟ ಸೇರಿದಂತೆ ಸ್ತ್ರೀಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.