ಕುಮಟಾ: ಇಲ್ಲಿಯ ರೋಟರಿ ಕ್ಲಬ್‌ನ 2022- 23ನೇ ರೋಟರಿ ವರ್ಷದ ಅಧ್ಯಕ್ಷರಾಗಿ ಮಹಾಲಸಾ ಹ್ಯಾಂಡಿಕ್ರಾಫ್ಟ್ ನ ಮ್ಯಾನೇಜಿಂಗ್ ಪಾರ್ಟ್ನರ್ ಚೇತನ್ ಡಿ.ಶೇಟ್, ಕಾರ್ಯದರ್ಶಿಯಾಗಿ ಹೀರೋ ದ್ವಿಚಕ್ರ ಶೋ ರೂಮಿನ ಮಾಲಕ ಪವನ್ ಶೆಟ್ಟಿ ಹಾಗೂ ಕೋಶಾಧ್ಯಕ್ಷರಾಗಿ ಕಂದಾಯ ಇಲಾಖೆಯ ಉದ್ಯೋಗಿ ಆ್ಯಂಕರ್ ಯೋಗೇಶ್ ಕೋಡ್ಕಣಿ ಅವರನ್ನು ರೋಟರಿ ಪರಿವಾರದವರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಅತುಲ್ ಕಾಮತ್ ಮತ್ತು ಶಿಲ್ಪಾ ಜಿನರಾಜ್, ಸಹಕಾರ್ಯದರ್ಶಿಗಳಾಗಿ ಅಜಿತ್ ಭಟ್ ಮತ್ತು ಕಿರಣ ನಾಯಕ, ಸಾರ್ಜೆಂಟ್- ಎಟ್- ಆರ್ಮ್ಸ್ ಆಗಿ ಫ್ರಾಂಕಿ ಫರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷೆ ಡಾ.ನಮೃತಾ ನಾಯಕ, ವಿವಿಧ ಸೇವಾ ಘಟಕಗಳ ಅಧ್ಯಕ್ಷರಾಗಿ ಸತೀಶ್ ನಾಯಕ, ಶೈಲೇಶ್ ನಾಯಕ, ಶಶಿಕಾಂತ ಕೊಳ್ವೇಕರ, ವಸಂತ ರಾವ್, ಯೋಗೀಶ್ ಕಾಮತ, ಡಾ.ದೀಪಕ ಡಿ.ನಾಯಕ, ಜಯವಿಠ್ಠಲ ಕುಬಾಲ, ಎಂ.ಬಿ.ಪೈ, ರೋಟೋಲೈಟ್ ಪತ್ರಿಕೆಯ ಪ್ರಧಾನ ಸಂಪಾದಕ ಮತ್ತು ಮಾಧ್ಯಮ ಮಧ್ಯವರ್ತಿಯಾಗಿ ಎನ್.ಆರ್.ಗಜು ಹಾಗೂ ವಿವಿಧ ಸಮಿತಿಗಳ ಚೇರ್‌ಮನ್‌ಗಳಾಗಿ ಸುರೇಶ್ ಭಟ್, ಜಿ.ಎಸ್.ಹೆಗಡೆ, ಜಿ.ಎಂ.ಕಾಮತ, ಡಾ.ವಾಗೀಶ್ ಭಟ್, ಡಾ.ನಿತೀಶ್ ಶಾನಭಾಗ, ರಾಮದಾಸ ಗುನಗಿ ಹಾಗೂ ಜಯಶ್ರೀ ಕಾಮತ ಕಾರ್ಯನಿರ್ವಹಿಸಲಿದ್ದಾರೆ.
ರೋರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಡಾ.ಎ.ವಿ.ಬಾಳಿಗಾ ಕಾಲೇಜಿನ ಜನರಲ್ ಸೆಕ್ರೆಟರಿ ವಿಕ್ರಮ್ ಪುರೋಹಿತ್, ಕಾರ್ಯದರ್ಶಿಯಾಗಿ ಬಿ.ಕಾಮ್. ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ಅಭಿಷೇಕ್ ಎಂ.ದಿವಾಕರ ಹಾಗೂ ಕೋಶಾಧ್ಯಕ್ಷರಾಗಿ ಅಂತಿಮ ಬಿಸಿಎ ಓದುತ್ತಿರುವ ವಿದ್ಯಾರ್ಥಿ ವಿಘ್ನೇಶ ವಿ.ಶಾನಭಾಗ ಅವರನ್ನು ರೋರ‍್ಯಾಕ್ಟ್ ಸದಸ್ಯರು ಒಮ್ಮತದಿಂದ ಆಯ್ಕೆಗೊಳಿಸಿದ್ದಾರೆ.