Slide
Slide
Slide
previous arrow
next arrow

ಸೇತುವೆ, ರಸ್ತೆ ಸೌಲಭ್ಯಕ್ಕೆ ಆಗ್ರಹಿಸಿ ಹಗುರಮನೆ ಗ್ರಾಮಸ್ಥರಿಂದ ತಹಶೀಲ್ದಾರ್ ಕೊಠಡಿಯಲ್ಲಿ ಧರಣಿ

300x250 AD

ಶಿರಸಿ: ಗ್ರಾಮಗಳು ಸಂಪೂರ್ಣ ಸಂಪರ್ಕದಿಂದ ವಂಚಿತವಾಗಿರುವ ಹಿನ್ನೆಲೆಯಲ್ಲಿ ಬದುಕಲು ಅವಕಾಶ ಮಾಡಿಕೊಡಿ ಎಂದು ಶಿರಸಿ ತಾಲೂಕ, ವಾನಳ್ಳಿ ಗ್ರಾಮ ಪಂಚಾಯತ, ಮುಸ್ಕಿ ಗ್ರಾಮದ ಹಗುರಮನೆ ಮತ್ತು ಮೇಲಿನಗದ್ದೆ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಇಂದು ಚಾಪೆ, ಕಂಬಳಿಯೊಂದಿಗೆ ಶಿರಸಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಗಂಭೀರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ತಹಶೀಲ್ದಾರ್ ಕೊಠಡಿಯಲ್ಲಿ ಗ್ರಾಮಸ್ಥರು ಧರಣಿ ಕುಳಿತ ಘಟನೆ ಇಂದು ಜರುಗಿತು.

ಹಗುರಮನೆ ಮತ್ತು ಮೇಲಿನಗದ್ದೆ ಹಳ್ಳಿಗಳಲ್ಲಿ 31 ಕುಟುಂಬ ಇದ್ದು, ಒಟ್ಟು ಜನಸಂಖ್ಯೆ 100 ರಷ್ಟು ಇರುವುದು. ಅಂಧರು, ಅಂಗವಿಕಲರು ಮತ್ತು ವೃದ್ಧರು ಇರುವಂತಹ ಅತ್ಯಂತ ಹಿಂದುಳಿದ ಒಕ್ಕಲಿಗ ಸಮಾಜಕ್ಕೆ ಸೇರಿದ ರೈತಾಪಿ ಕುಟುಂಬದ ಜನವಸತಿ ಇರುವ ಈ ಗ್ರಾಮದಲ್ಲಿ ವಾಹನ ಸಂಪರ್ಕಕಡಿತಗೊಂಡು ಮುಂದಿನ 8 ತಿಂಗಳಿಗೆ ಅವಶ್ಯವಾದ ಜೀವನ ನಿರ್ವಹಣೆಗೆ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ಗ್ರಾಮಸ್ಥರು ಶಿರಸಿಗೆ ಆಗಮಿಸಿದ ತಮ್ಮ ಅಹವಾಲನ್ನು ಹೇಳಿಕೊಂಡರು.

ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳಿಗೆ ಹೋಗುವ ಸುಮಾರು 18 ಮಕ್ಕಳಿಗೆ ರಸ್ತೆಯ ಸಂಪರ್ಕ, ಕಾಲುಶಂಕವಿಲ್ಲದೇ ಖಾಸಗಿ ಮತ್ತು ಇನ್ನೀತರ ಅತೀಕ್ರಮಣ ಕ್ಷೇತ್ರದಿಂದ ಅರಣ್ಯ ಮತ್ತು ಗಿಡ ಗಂಟಿಗಳ ಮಧ್ಯದಿಂದಲೇ ಓಡಾಡುತ್ತಿದ್ದರು. ಆದರೆ, ಅತೀವೃಷ್ಟಿಯಿಂದ ಶಾಲೆಯ ಸೌಲಭ್ಯದಿಂದ ವಂಚಿತರಾಗಿರುವಂತಹ ಮಕ್ಕಳು ಸಹಿತ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.

24 ತಾಸಿನಲ್ಲಿ ತಹಶೀಲ್ದಾರ್ ಭೇಟಿ ಆಶ್ವಾಸನೆ ;ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ, ತದನಂತರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಳಕ್ಕೆ ಭೇಟ್ಟಿ ನೀಡಿದ್ದಾಗಿಯೂ. ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮದ ಜನಜೀವನ ಅಸ್ತವ್ಯಸ್ತವಾಗಿರುವುದರಿಂದ ತುರ್ತು ವ್ಯವಸ್ಥೆ ಹಾಗೂ ಸರ್ವಋತು ರಸ್ತೆ, ಸೇತುವೆ ನಿರ್ಮಿಸಲು ಆಗ್ರಹಿಸಿ ಇಂದು ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿಯೇ ವಾಸ್ತವ್ಯ ಮಾಡುತ್ತೇವೆ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ 24 ತಾಸಿನಲ್ಲಿ ಸ್ಥಳ ಪರಿಶೀಲಿಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇನೆ ಎಂದ ಹಿನ್ನೆಲೆಯಲ್ಲಿ ಒಂದು ತಾಸಿನಿಂದ ಜರುಗಿದ ಧರಣಿ ಗ್ರಾಮಸ್ಥರು ಹಿಂದಕ್ಕೆ ಪಡೆದರು.

300x250 AD

ಬದುಕಲು ಅವಕಾಶ ನೀಡಿ:ವರ್ಷಂಪ್ರತಿ ವರ್ಷದಲ್ಲಿ 8 ತಿಂಗಳು ಸಂಪರ್ಕ ಕೊರತೆಯಿಂದ ಜೀವನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬದುಕಲು ಅವಕಾಶ ಕೊಡಿ ಎಂದು ತಹಶೀಲ್ದಾರ್ ಅವರಿಗೆ ಮಹಿಳೆಯರು, ಮಕ್ಕಳು ಕೇಳಿಕೊಂಡಿರುವ ದೃಶ್ಯ ಮನಕಲಕುವಂತಿತ್ತು.

ಧರಣಿಯಲ್ಲಿ ರಾಮ ಗೌಡ, ಸವಿತಾ ಗೌಡ, ಸರ್ವಾ ಗೌಡ, ತಿಮ್ಮ ಗೌಡ, ನಾರಾಯಣ ಗೌಡ, ಅನ್ನಪೂರ್ಣ ಗೌಡ, ಓಮಿ ಗೌಡ, ಗಂಗೆ ಗೌಡ, ನಾಗವೇಣಿ ಗೌಡ, ದೇವು ಗೌಡ, ಶ್ರೀನಿವಾಸ ಗೌಡ, ವೆಂಕಟೇಶ್ ಗೌಡ, ನಾಗರಾಜ ಗೌಡ, ಗೌರಿ ಗೌಡ ಮುಂತಾದ ಗ್ರಾಮಸ್ಥ ಪ್ರಮುಖರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top