ಜೊಯಿಡಾ: ತಾಲೂಕಿನ ಕ್ಯಾಸಲ್‌ರಾಕ್ ಶಾಲೆಯ 6ನೇ ತರಗವಿದ್ಯಾರ್ಥಿನಿ ತಿ ಸೋನಾಕ್ಷಿ ದೇಸಾಯಿ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಹತ್ತನೇ ರ‍್ಯಾಂಕ್ ಪಡೆದಿದ್ದಾಳೆ.
ಕ್ಯಾಸಲ್‌ರಾಕ್‌ನಂತಹ ದಟ್ಟ ಕಾಡಿನ ಪ್ರದೇಶದಲ್ಲಿದ್ದರೂ ಸಹಿತ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಶಿಕ್ಷಕರ ಸಹಾಯದೊಂದಿಗೆ ನವೋದಯ ಪರೀಕ್ಷೆಯಲ್ಲಿ ಪಾಸಾಗಿದ್ದಾಳೆ. ಈಕೆಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ್, ಸಿಆರ್‌ಪಿ ಭಾಸ್ಕರ ಗಾಂವ್ಕರ, ಮಾರ್ಗದರ್ಶನ ನೀಡಿದ್ದು, ರವಿಚಂದ್ರನ್ ಕುಮಟಾ ಹಾಗೂ ಶಾಲೆಯ ಶಿಕ್ಷಕರು ಮತ್ತು ಊರ ನಾಗರಿಕರು ಅಭಿನಂದಿಸಿದ್ದಾರೆ.