Slide
Slide
Slide
previous arrow
next arrow

ಮನೆ ಮೇಲೆ ಬಿದ್ದ ಆಲದ ಮರ; 6 ಜನರಿಗೆ ಗಾಯ

300x250 AD

ಹೊನ್ನಾವರ: ತಾಲೂಕಿನ ಹಳದೀಪುರ ಬೈಗಾರಕೇರಿ ಬಳಿ ಬೃಹತ್ ಆಲದ ಮರವೊಂದು ಸೋಮವಾರ ಮುಂಜಾನೆ ಮನೆ ಮೇಲೆ ಬಿದ್ದಿದ್ದು ಪರಿಣಾಮ ಮನೆ ಸಂಪೂರ್ಣ ಜಖಂ ಆಗಿದ್ದು, ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಆರು ಮಂದಿ ಗಾಯಗೊಂಡಿದ್ದಾರೆ.

ಗಂಗಾಧರ ಶೇಟ್ ಮಾಲೀಕತ್ವದ ಮನೆಯಲ್ಲಿದ್ದ ಉಷಾ ಶೇಟ್, ರೂಪಾ ಶೇಟ್, ಅಖಿಲೇಶ ಶೇಟ್, ಅನಿತಾ ಹರಿಕಂತ್ರ, ಯೋಗೀಶ ಹರಿಕಂತ್ರ, ಅರುಣ ಹರಿಕಂತ್ರ ಅವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ 8 ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಸಮೀಪದಲ್ಲೆ ಇರುವ ಇನ್ನೊಂದು ಮರವು ಮುಂದಿನ ದಿನದಲ್ಲಿ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುವುದರಿಂದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆಗಾಗಿ ಆ ಮರವನ್ನು ಕಟಾವು ಮಾಡುವ ಮೂಲಕ ಅಪಾಯ ತಪ್ಪಿಸಿದ್ದಾರೆ.

300x250 AD

ಸ್ಥಳದಲ್ಲಿಯೇ ಇದ್ದ ತಹಶೀಲ್ದಾರ ನಾಗರಾಜ ನಾಯ್ಕಡ್, ಗ್ರಾಮ ಪಂಚಾಯತಿ ಅಧ್ಯಕ್ಷ ಅಜಿತ್ ನಾಯ್ಕ, ಗ್ರಾ.ಪಂ. ಸದಸ್ಯರು, ಕಂದಾಯ, ಅರಣ್ಯ, ಪೊಲೀಸ್, ಹೆಸ್ಕಾಂ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ರಕ್ಷಿಸಿ ಮರ ಕಟಾವು ನಡೆಸುವ ಮೂಲಕ ರಸ್ತೆ ಸಂಪರ್ಕ ಸರಿಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top