ಶಿರಸಿ: ರಾಜ್ಯಾದ್ಯಂತ ಸೇವಾ ಭದ್ರತೆಗೆ ಅಗ್ರಹಿಸಿ ರಾಜ್ಯಾದ್ಯಂತ ಮುನ್ಸಿಪಾಲ್ ಕಾರ್ಮಿಕರು ಹಮ್ಮಿಕೊಂಡ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಬೆಂಬಲ ವ್ಯಕ್ತಪಡಿಸುತ್ತಾ, ರಾಜ್ಯಪಾಲರು ಮಧ್ಯಪ್ರವೇಶಿಸಿ ಸಾಮಾಜಿಕ ನ್ಯಾಯದಡಿಯಲ್ಲಿ ನ್ಯಾಯ ಒದಗಿಸಿಕೋಡಬೇಕೆಂದು ಒತ್ತಾಯಿಸಿದರು.
ಅವರು ಶಿರಸಿ ನಗರಸಭಾ ಕಚೇರಿಯ ಎದುರುಗಡೆ ಜಿಲ್ಲಾ ಮತ್ತು ತಾಲೂಕ ಮುನ್ಸಿಪಾಲ್ ಕಾರ್ಮಿಕರ ಸಂಘದ ಆಶ್ರಯದಲ್ಲಿ ಜರಗುತ್ತಿರುವ ಅನಿರ್ದಿಷ್ಟ ಧರಣಿ, ಮುಷ್ಕರ ಸ್ಥಳಕ್ಕೆ ಭೇಟಿಕೊಟ್ಟು ಧರಣಿ ನಿರತರೊಂದಿಗೆ ಮಾತನಾಡಿದರು.
ಪೌರಕಾರ್ಮಿಕರ ಸಮಾಜ ಸ್ಥಿತಿಗತಿ ಮತ್ತು ಕ್ಷೇಮಾಭಿವೃದ್ಧಿ ಅಧ್ಯಯನ ನಡೆಸಿದ ಬೆಂಗಳೂರು ವಿಶ್ವವಿದ್ಯಾಲಯದ ಉನ್ನತ ಮಟ್ಟದ ತಂಡ ಶಿಫಾರಸ್ಸಿನಂತೆ ಸಫಾಯಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಧರಣಿ ನಿರತ ಪ್ರಮುಖರಾದ ಕಾರ್ಮಿಕ ಧುರಿಣ ನಾಗಪ್ಪ ಎಮ್ ನಾಯ್ಕ, ಗಣಪತಿ ಹರಿಜನ, ಕಿರಣ ಹರಿಜನ, ಅನಿಲ್ ಹರಿಜನ, ಮಹೇಶ ಹರಿಜನ, ಶ್ರೀಕಾಂತ ನಾಯ್ಕ, ಸುಶೀಲಾ ಹರಿಜನ, ಗಣೇಶ ದೇಸಳ್ಳಿ, ಸಂತೋಷ ಹರಿಜನ ಮುಂತಾದ ಪ್ರಮುಖರೊಂದಿಗೆ ಚರ್ಚಿಸಿದರು.