Slide
Slide
Slide
previous arrow
next arrow

ಕ್ರಿಮ್ಸ್ ನಲ್ಲಿ ಅರವಳಿಕೆ ವಿಭಾಗ ಹಾಗೂ ನೋವು ನಿವಾರಣಾ ಘಟಕ ಉದ್ಘಾಟನೆ

300x250 AD

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಹೊಸದಾಗಿ ನಿರ್ಮಿತಗೊಂಡಿರುವ ಅರವಳಿಕೆ ವಿಭಾಗ ಹಾಗೂ ನೋವು ನಿವಾರಣಾ ಘಟಕವನ್ನು ವೈದ್ಯರ ದಿನದಂದು ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಂಸ್ಥೆಗೆ ಹೊಸದಾಗಿ ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಪ್ರವೇಶ ಪಡೆದು ವಿದ್ಯಾರ್ಜನೆಯನ್ನು ಮಾಡುತ್ತಿದ್ದಾರೆ. ಇವರ ಕಲಿಕೆಯ ಹಿತದೃಷ್ಟಿಯಿಂದ ಹಾಗೂ ರೋಗಿಗಳ ಅನುಕೂಲಕ್ಕೆ ತಕ್ಕಂತೆ ವಿವಿಧ ಉನ್ನತ ಉಪಕರಣಗಳನ್ನು ಪಡೆಯಲಾಗಿದೆ. ಇದರಿಂದ ಜಿಲ್ಲೆಯ ಬೇರೆ ಬೇರೆ ಸ್ಥಳಗಳಿಂದ ಬರುವ ಗಂಭೀರ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವಾಗ ಸೂಕ್ತವಾದ ಅರವಳಿಕೆಯನ್ನು ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್ ಮಾತನಾಡಿ, ಆಸ್ಪತ್ರೆಗೆ ಇತ್ತಿಚಿನ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಗಂಭೀರ ಕಾಯಿಲೆಗಳನ್ನು ಹಾಗೂ ಶಸ್ತ್ರಚಿಕಿತ್ಸೆಗಳನ್ನು ನಮ್ಮ ಕ್ರಿಮ್ಸ್ ಆಸ್ಪತ್ರೆಯಲ್ಲಿ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

300x250 AD

ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಭಟ್, ನೋವು ನಿವಾರಣಾ ಘಟಕದಲ್ಲಿ ತಜ್ಞ ಅರವಳಿಕೆ ವೈದ್ಯರು ಕ್ಯಾನ್ಸರ್ ಹಾಗೂ ಇನ್ನಿತರೆ ಬಹುದಿನಗಳಿಂದ ಇರುವ ಕಾಯಿಲೆಗಳಿಂದ ಉಂಟಾಗುವ ನೋವಿಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಶಿವಕುಮಾರ ಜಿ.ಎಲ್., ಅರವಳಿಕೆ ವಿಭಾಗದ ಎಲ್ಲ ಬೋಧಕ ವೈದ್ಯರು, ಶೂಶ್ರುಷಾಧ್ಯಕ್ಷಕಿ ಲಕ್ಷ್ಮಿ ಕೊನೆಸಾರ ಹಾಗೂ ಇತರೆ ಸಿಬ್ಬಂದಿ ಇದ್ದರು.

Share This
300x250 AD
300x250 AD
300x250 AD
Back to top