Slide
Slide
Slide
previous arrow
next arrow

ವೈದ್ಯರ ದಿನಾಚರಣೆ:ರೋಟರಿ ಕ್ಲಬ್ ಸದಸ್ಯರಿಂದ ವೈದ್ಯರಿಗೆ ಶುಭಾಶಯ

300x250 AD

ಹೊನ್ನಾವರ: ವೈದ್ಯರ ದಿನದ ಅಂಗವಾಗಿ ರೋಟರಿ ಕ್ಲಬ್ ಸದಸ್ಯರು ಪಟ್ಟಣದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಕ್ಲಬ್ ನೂತನ ಅಧ್ಯಕ್ಷ ಮಹೇಶ ಕಲ್ಯಾಣಪುರ ಮಾತನಾಡಿ, ವೈದ್ಯರ ಸೇವೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ತಾಲೂಕಿನಲ್ಲಿ ಉತ್ತಮ ಸುಸಜ್ಜಿತ ಆಸ್ಪತ್ರೆಯ ಮೂಲಕ ಸೇವೆ ನೀಡುತ್ತಿರುವ ವೈದ್ಯರನ್ನು ಗುರುತಿಸಿ ಗೌರವಿಸುವ ಕಾರ್ಯ ರೋಟರಿ ಕ್ಲಬ್ ಮಾಡುತ್ತಿದ್ದು, ವೈದ್ಯರ ದಿನದ ಶುಭ ಸಂದರ್ಭದಲ್ಲಿ ರೋಟರಿ ಪರಿವಾರದವರು ಒಗ್ಗಟ್ಟಾಗಿ ನಿಮ್ಮ ಸೇವೆಗೆ ಕೃತ್ನಜ್ಞತೆ ತಿಳಿಸುತ್ತಿದ್ದೇವೆ. ವೈದ್ಯಕೀಯ ವೃತ್ತಿ ಪವಿತ್ರವಾಗಿದ್ದು, ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಾಣದ ಹಂಗು ತೊರೆದು ನೀಡಿದ ಸೇವೆ ಸ್ಮರಣಿಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

300x250 AD

ತಾಲೂಕ ಆಸ್ಪತ್ರೆ ಹಾಗೂ ಬಳಕೂರು ಆಸ್ಪತ್ರೆಗೂ ಭೇಟಿ ನೀಡಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯ ಮಾರಿಯಾ ಗೊರಟ್ಟಿ, ರೋಟರಿ ಕ್ಲಬ್ ಕಾರ್ಯದರ್ಶಿ ಗಾಯತ್ರಿ ಗುನಗಾ, ನಿಕಟಪೂರ್ವ ಅಧ್ಯಕ್ಷ ಮಾನ್ವೇಲ್ ಸ್ಟೀಫನ್ ರೋಡ್ರಗೀಸ್, ವಿನೋದ ನಾಯ್ಕ, ಸೂರ್ಯಕಾಂತ ಸಾರಂಗ, ಸತ್ಯ ಜಾವಗಲ್, ದಿನೇಶ ಕಾಮತ್, ಡಾ.ರಾಜೇಶ ಕಿಣಿ, ಡಾ.ಆಶಿಕ್ ಹೆಗ್ಡೆ, ಡಾ.ರಂಗನಾಥ ಪೂಜಾರಿ, ಡಾ.ಯುವರಾಜ್, ಡಾ.ಮಂಜುಳಾ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಜರಿದ್ದರು.

Share This
300x250 AD
300x250 AD
300x250 AD
Back to top