• Slide
  Slide
  Slide
  previous arrow
  next arrow
 • ಪ್ರಭಾತನಗರ ಶಾಲಾ ಕಾಂಪೌಂಡ್ ಗೋಡೆ ಕುಸಿತ

  300x250 AD

  ಹೊನ್ನಾವರ:ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆಯು ಕುಸಿದು ಹಾನಿ ಸಂಭವಿಸಿದೆ.

  ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಾಲೆಯ ಮೈದಾನ ಮತ್ತು ಗಟಾರಕ್ಕೆ ನೀರು ನುಗ್ಗಿದ ಪರಿಣಾಮ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಶಾಲೆಯ ಮೂರು ವರ್ಗ ಕೋಣೆಗಳು ತುಂಬಾ ಹಳೆಯದಾಗಿದ್ದು, ಕುಸಿಯುವ ಭೀತಿ ಎದುರಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಕಲಿಯುವಂತಾಗಿದೆ.

  ಪ್ರಭಾತನಗರ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ಕಾಂಪೌಂಡ್ ಮತ್ತು ಮೈದಾನದ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಣಾಧಿಕಾರಿಗಳು ಪಟ್ಟಣ ಪಂಚಾಯತಿಗೆ ತಿಳಿಸಿ ಎನ್ನುತ್ತಾರೆ. ಪಟ್ಟಣ ಪಂಚಾಯತಿಯವರು ಶಾಸಕರಿಗೆ ತಿಳಿಸಿ ಎನ್ನುತ್ತಾರೆ. ಶಾಸಕರನ್ನು ಶಾಲೆಗೆ ಕರೆಯಿಸಿ ಸಮಸ್ಯೆ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಸಮಸ್ಯೆ ಬಗೆಹರಿಯದ ಪರಿಣಾಮವಾಗಿ ಗುರುವಾರ ಕಟ್ಟಡ ಕುಸಿದು ಬಿದ್ದಿದೆ.

  300x250 AD

  ಘಟನೆ ಸಂಭವಿಸಿದ ಬಳಿಕ ಸ್ಥಳಕ್ಕೆ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಹಾಗೂ ವಾರ್ಡ್ ಸದಸ್ಯೆ ಮೇಧಾ ನಾಯ್ಕ ಸ್ಥಳದಲ್ಲೆ ಇದ್ದು, ಜೆಸಿಬಿ ಯಂತ್ರದ ಮೂಲಕ ಗಟಾರ ಸ್ವಚ್ಛತೆ ಹಾಗೂ ಶಾಲಾ ಆವರಣದಲ್ಲಿ ನೀರು ಸರಾಗವಾಗಿ ಸಾಗಲು ಅನುವು ಮಾಡಿಕೊಟ್ಟರು. ಶಾಸಕ ದಿನಕರ ಶೆಟ್ಟಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮಂಬರುವ ದಿನದಲ್ಲಿ ಕಾಂಪೌಂಡ್ ಹಾಗೂ ಹೊಸ ಕಟ್ಟಡ ನಿರ್ಮಿಸುವ ಭರವಸೆ ನೀಡಿದರು.

  ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಎಚ್.ಎಂ.ಮಾರುತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಟ್ಟಡ ಕೊರತೆ ಹಾಗೂ ಶಿಕ್ಷಕರ ಕೊರತೆ ಸೇರಿದಂತೆ ಶಾಲೆಯ ವಿವಿಧ ಬೇಡಿಕೆಯ ಕುರಿತು ಮಾಹಿತಿ ನೀಡಿದರು. ಹಂತಹಂತವಾಗಿ ಸಮಸ್ಯೆ ಬಗೆಹರಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top