• Slide
    Slide
    Slide
    previous arrow
    next arrow
  • ಪ್ರತಿಯೊಬ್ಬರ ಸಹಕಾರದಿಂದ ನಗರ ಅಭಿವೃದ್ಧಿ ಸಾಧ್ಯ:ಡಾ.ನಿತಿನ್ ಪಿಕಳೆ

    300x250 AD

    ಕಾರವಾರ: ಕಾರವಾರ ನಗರದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ನಗರಸಭೆ ಸದಸ್ಯರು ಸಹಕಾರ- ಸಮನ್ವಯತೆ ದೃಷ್ಟಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಸಾರ್ವಜನಿಕರಿಗೆ ಸೌಲಭ್ಯಗಳು ಸಿಗುವಂತೆ ಅನುಕೂಲ ಮಾಡಿಕೊಡಬೇಕು ಎಂದು ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹೇಳಿದರು.

    ನಗರಸಭೆಯ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರವಾರದ ಮೂಲಭೂತ ಸಮಸ್ಯೆಯಾದ ಯುಜಿಡಿ ಯೋಜನೆಗಾಗಿ ಕ್ರಿಯಾಯೋಜನೆ ತಯಾರಿಸಲಾಗುವುದು. ಅದಕ್ಕಾಗಿ 293 ಕೋಟಿ ಅನುದಾನ ಬಳಕೆ ಮಾಡಲಾಗುವುದು. ಕೆಲವು ಜಾಗದ ಸಮಸ್ಯೆ ಬಗೆಹರಿಸಿಕೊಂಡು ಹಾಗೂ ಸಿಆರ್‌ಝಡ್ ಅನುಮತಿ ಪಡೆದು ಕಾಮಗಾರಿ ಶುರುಮಾಡಲಾಗುವುದು. ಈ ಕಾಮಗಾರಿಯಿಂದ ಕಾರವಾರ ನಗರ ಸ್ವಚ್ಛ ನಗರವಾಗಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

    ಕೋರ್ಟ್ ಆದೇಶದ ಪ್ರಕಾರ ಕೋಡಿಬಾಗ ರಸ್ತೆಯಲ್ಲಿರುವ ಖಾಸಗಿ ಆಸ್ತಿಗಳನ್ನು ರಸ್ತೆ ಅಭಿವೃದ್ಧಿ ಪಡಿಸುವ ಕುರಿತು ಸರ್ವೇ ಕೈಗೊಂಡು ಕಾಮಗಾರಿ ಪ್ರಾರಂಭಿಸಲಾಗುವುದು. ನಲ್ಲಿ ಜೋಡಣೆ ಡಿಸ್‌ಕನೆಕ್ಟ್ ವಿಚಾರದಲ್ಲಿ ಬಿಲ್ ಕಟ್ಟದ ಮನೆಮಾಲಿಕರ ಆಸ್ತಿಯಲ್ಲಿ ಭೋಜಾ ಕೂಡಿಸಲಾಗುವುದು ಹಾಗೂ ಕಾರಾಗೃಹ ಸಿಬ್ಬಂದಿ ವಸತಿ ಗೃಹಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ನಗರಸಭಾ ಪೌರಾಯುಕ್ತ ಆರ್.ಪಿ.ನಾಯ್ಕ, ಸಭೆಯಲ್ಲಿನ ಸದಸ್ಯರ ಮನವಿಯಂತೆ ಐಆರ್‌ಬಿ ಕಾಮಗಾರಿಯಿಂದ ಲಂಡನ್ ಬ್ರಿಡ್ಜ್ ಹತ್ತಿರ ಕಲ್ಲು ಮಣ್ಣು ತೆರವುಗೊಳಿಸದೇ ಇರುವುದರಿಂದ ಮಳೆಯಿಂದಾದ ಸಮಸ್ಯೆಗೆ ಸ್ಪಂದಿಸಿ ಐಆರ್‌ಬಿ ಅಧಿಕಾರಿಗೆ ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸಲು ಹಾಗೂ ಮಳೆ ಹಾಗೂ ಇನ್ನಿತರ ಕಾರಣಗಳಿಂದ ನೀರು ಮುಂದೆ ಹರಿದು ಹೋಗಲು ಬ್ರಿಡ್ಜ್ ನ ಎರಡು ಭಾಗಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಡಬೇಕೆಂದು ಸೂಚಿಸಿದರು.

    300x250 AD

    ಸಭೆಯಲ್ಲಿ ಇನ್ನಿತರ ವಿಷಯಗಳಾದ ಬೀದಿ ದೀಪ ನಿರ್ವಹಣೆ ಟೆಂಡರ್, ಅಧ್ಯಕ್ಷರ ಬಾಡಿಗೆ ವಾಹನದ ಕಾಲಾವಧಿ ವಿಸ್ತರಣೆ, ಜಿಯೋ ಇನ್ಪೋಕಾಮ್‌ರವರಿಗೆ ನಗರ ಪ್ರದೇಶದಲ್ಲಿ ಹೆಚ್.ಡಿ ಡ್ರಿಲ್ ಮಾಡಿ ಕೇಬಲ್ ಅಳವಡಿಸುವ ಕುರಿತು ಚರ್ಚಿಸಿ ಒಪ್ಪಿಗೆ ಸೂಚಿಸಲಾಯಿತು.

    ಸಭೆಯಲ್ಲಿ ಉಪಾಧ್ಯಕ್ಷ ಪಿ.ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮ್ಸೆ, ನಗರಸಭೆ ಸದಸ್ಯರು, ಅಧಿಕಾರಿ- ಸಿಬ್ಬಂದಿಗಳು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top