• Slide
    Slide
    Slide
    previous arrow
    next arrow
  • ದಿ.ಸುರೇಶ ನಾಯ್ಕಗೆ ಕಸಾಪ’ದಿಂದ ಶ್ರದ್ಧಾಂಜಲಿ

    300x250 AD

    ಕುಮಟಾ: ಇತ್ತೀಚೆಗೆ ನಿಧನರಾದ ಹೊಸ ಹೆರವಟ್ಟಾದ ಸುರೇಶ ನಾಯ್ಕರವರ ಶ್ರದ್ಧಾಂಜಲಿ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸರಕಾರಿ ನೌಕರರ ಭವನದಲ್ಲಿ ನಡೆಸಲಾಯಿತು.

    ಸಾಹಿತಿ ಬೀರಣ್ಣ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮೀಯತೆಯಿಂದ ಎಲ್ಲರನ್ನು ಬರಮಾಡಿಕೊಳ್ಳುವ ಸರಳ ಸಜ್ಜನರಾದ ಸುರೇಶ ನಾಯ್ಕರವರು ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಕಳಂಕ ರಹಿತ, ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಸಾಮಾನ್ಯ ಜನರಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಎಲ್ಲರ ಪ್ರೀತಿ ಗಳಿಸಿದ್ದರು ಎಂದರು.

    ಹೊನ್ನಾವರದ ಸಾಹಿತಿ ಡಾ.ಎಸ್.ಡಿ.ಹೆಗ್ಡೆ ಮಾತನಾಡಿ, ಮೂಢನಂಬಿಕೆಗಳ ಬಗ್ಗೆ ಬಲವಾಗಿ ವಿರೋಧಿಸುವ ಅವರು, ವ್ಯಕ್ತಿ ಪೂಜೆ ಮಾಡದೇ ವೃತ್ತಿ ಪೂಜೆ ಮಾಡಿದ ಸಜ್ಜನರು. ವೈಚಾರಿಕ ನೆಲೆಗಟ್ಟಿನ ಗಟ್ಟಿ ಮನೋಧೋರಣೆ ಹೊಂದಿದ್ದರು ಎಂದರು.

    ನಿವೃತ್ತ ಪ್ರಾಧ್ಯಾಪಕ ಎಂ.ಜಿ.ನಾಯ್ಕ ಮಾತನಾಡಿ, ಸಾಹಿತ್ಯದ ಯಾವುದೇ ಕಾರ್ಯಕ್ರಮವಿರಲಿ ಅಲ್ಲೆಲ್ಲ ಬಹು ಆಸಕ್ತಿಯಿಂದ ಭಾಗವಹಿಸಿ ಕನ್ನಡದ ಪರಿಚಾರಕರಾಗಿ ಕಾರ್ಯನಿರ್ವಹಿಸಿದ ಕನ್ನಡದ ಕಟ್ಟಾಳುಗಳಾಗಿದ್ದರು. ಸದಾ ಹಸನ್ಮುಖಿಗಳಾಗಿ ಎಲ್ಲರನ್ನು ರಂಜಿಸುವ ಕಲೆ ಅವರಿಗೆ ತಿಳಿದಿತ್ತು ಎಂದರು.

    300x250 AD

    ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಸಮಾಜ ಸೇವೆಯ ಮೂಲಕ ವೃತ್ತಿ ಬದುಕನ್ನು ವಿಶಿಷ್ಟವಾಗಿ ಪ್ರೀತಿಸುವುದರ ಮೂಲಕ ಸಾಮಾನ್ಯ ಜನರ ಮನಸ್ಸನ್ನು ಗೆದ್ದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು. ಸಾಹಿತ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕನ್ನಡದ ಸೇವೆ ಮಾಡಿದ ಕಟ್ಟಾಳುಗಳಾಗಿದ್ದರು. ಸಾಹಿತ್ಯ ಪರಿಷತ್ತಿಗೆ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು ಎಂದರು.

    ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಕಾರ್ಯದರ್ಶಿಗಳಾದ ಪ್ರೊ. ಪ್ರಮೋದ ನಾಯ್ಕ, ಪ್ರೊ. ವನ್ನಳ್ಳಿ ಗಿರೀಶ, ಸಾಹಿತಿ ಎನ್. ಆರ್.ಗಜು. ಪ್ರದೀಪ್ ನಾಯಕ, ಸುರೇಶ್ ಭಟ್, ಎಂ. ಜಿ. ನಾಯ್ಕ ಅವರ ಸೇವೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಸಭೆಯಲ್ಲಿ ಪರಿಷತ್ತಿನ ಸದಸ್ಯರಾದ ವಸಂತ ಶೇಟ್, ಪ್ರಕಾಶ್ ನಾಯ್ಕ, ಜನಾರ್ಧನ ನಾಯ್ಕ ಇತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top