• first
    second
    third
    previous arrow
    next arrow
  • ಅಂತರ್‌ಶಾಲಾ ಯೋಗ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

    300x250 AD

    ಕಾರವಾರ: ಅರಗಾ ನೇವಿ ಚಿಲ್ಡ್ರನ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಅಂತರ್‌ಶಾಲಾ ಯೋಗ ಸ್ಪರ್ಧೆಯಲ್ಲಿ ಬಾಲಮಂದಿರ ಪ್ರೌಢಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಎಸ್.ನಾಯ್ಕ (14 ವರ್ಷದೊಳಗಿನ ಮಕ್ಕಳಲ್ಲಿ) ತೃತೀಯ ಸ್ಥಾನ ಪಡೆದಿದ್ದರೆ, 9ನೇ ತರಗತಿಯ ಪ್ರಣವ ಟಿ.ಹರಿಕಂತ್ರ (16 ವರ್ಷದೊಳಗಿನ ಮಕ್ಕಳಲ್ಲಿ) ದ್ವಿತೀಯ ಹಾಗೂ 7ನೇ ತರಗತಿಯ ವೇದಿಕಾ ತಾಂಡೇಲ್ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ.

    ವಿದ್ಯಾರ್ಥಿಗಳ ಈ ಸಾಧನೆಗೆ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ರತ್ನಾಕರ ಮಡಿವಾಳ, ಪ್ರಶಾಂತ ನಾಯ್ಕ ಮತ್ತು ಎಲ್ಲಾ ಶಿಕ್ಷಕ- ಶಿಕ್ಷಕಿಯರು, ಸಿಬ್ಬಂದಿ ಹಾಗೂ ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top