• Slide
    Slide
    Slide
    previous arrow
    next arrow
  • ಕೊಳವೆಬಾವಿಗೆ ಬಿದ್ದ ಬಾಲಕ:ಯೋಧನ ಮಡಿಲಲ್ಲಿ ರಕ್ಷಣೆ

    300x250 AD

    ನವದೆಹಲಿ: ಗುಜರಾತ್‌ನಲ್ಲಿ ಎರಡು ವರ್ಷದ ಮಗುವನ್ನು ಬಾವಿಯಿಂದ ರಕ್ಷಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಸೈನಿಕರೊಬ್ಬರು ಪುಟಾಣಿ ಬಾಲಕನನ್ನು ರಕ್ಷಣೆ ಮಾಡಿದ ಬಳಿಕ ಆರೈಕೆ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನ ಗೆಲ್ಲುತ್ತಿದೆ.

    ವೈರಲ್ ಆದ ಚಿತ್ರದಲ್ಲಿ, ಯೋಧ ತನ್ನ ತೋಳುಗಳಲ್ಲಿ ಮಗುವನ್ನು ಅಪ್ಪಿಕೊಂಡು ಆಂಬ್ಯುಲೆನ್ಸ್‌ನ ಹಿಂಭಾಗದಲ್ಲಿ ಕುಳಿತಿರುವುದನ್ನು ಕಾಣಬಹುದು. ರಕ್ಷಿಸಲ್ಪಟ್ಟ ಮಗು ಆರೋಗ್ಯವಾಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.

    ಗುಜರಾತ್ ಸರ್ಕಾರದ ಗೃಹ ವ್ಯವಹಾರಗಳ ರಾಜ್ಯ ಸಚಿವ ಹರ್ಷ ಸಂಘವಿ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ. “ಭಾವನೆಗಳು ಮತ್ತು ಕರ್ತವ್ಯವು ಒಟ್ಟಿಗೆ ಸಾಗಿದಾಗ. ಭಾರತೀಯ ಸೇನೆಗೆ ಹ್ಯಾಟ್ಸ್ ಆಫ್” ಎಂದು ಸಚಿವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ.

    300x250 AD

    ಬಾಲಕ ಶಿವಂ, ಮಂಗಳವಾರ ಸಂಜೆ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಜಮೀನೊಂದರಲ್ಲಿ ತನ್ನ ತಂದೆ-ತಾಯಿ ಕೂಲಿ ಕೆಲಸ ಮಾಡುತ್ತಿದ್ದಾಗ ಆಟವಾಡುತ್ತ ಆಳವಾದ ಕೊಳವೆಬಾವಿಯಲ್ಲಿ ಬಿದ್ದಿದ್ದ. ಎರಡು ವರ್ಷದ ಮಗು 20 ಅಡಿ ಆಳದಲ್ಲಿ ಸಿಲುಕಿಕೊಂಡಿತ್ತು. ಬಳಿಕ ಸೈನಿಕರು ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ.

    ಕೃಪೆ- news13.in

    Share This
    300x250 AD
    300x250 AD
    300x250 AD
    Leaderboard Ad
    Back to top