Slide
Slide
Slide
previous arrow
next arrow

ಧರೆಗುರುಳಿದ ಮರ : ಮನೆ ಜಖಂ

300x250 AD

ದಾಂಡೇಲಿ : ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ ಪರಿಣಾಮವಾಗಿ ಮನೆಯೊಂದು‌ ಜಖಂಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಸವಿತಾ ಪೆಡ್ನೇಕರ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯ ಮೇಲೆ ಮರ ಬಿದ್ದ ಪರಿಣಾಮವಾಗಿ ಮನೆಯ ಮೇಲ್ಛಾವಣಿ ಸಂಪೂರ್ಣ ಒಡೆದು ಹೋಗಿದೆ. ಮನೆಯ ಗೋಡೆಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಗಾಯ ನೋವಾಗಲಿ, ಜೀವಹಾನಿಯಾಗಿಲ್ಲ.

300x250 AD

ಸ್ಥಳಕ್ಕೆ ನಗರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ, ತಹಶೀಲ್ದಾರ್ ಕಾರ್ಯಾಲಯ, ನಗರ ಸಭೆ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top